suddibindu.in
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಹನ್ನೊಂದು ಮಂದಿ ಸಿಲುಕಿರುವ ಬಗ್ಗೆ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಸಾಯಿ ಈಶ್ವರ ಗುರೂಜಿ ಘಟನೆಯಲ್ಲಿ ಸಾವನ್ನಪ್ಪಿರುವವರು ಹನ್ನೊಂದು ಮಂದಿಯಲ್ಲ 17ಮಂದಿ ಎನ್ನುವ ಬಗ್ಗೆ ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ
ಉಡುಪಿಯ ದ್ವಾರಕಾಮಯಿ ಮಠದ ಸ್ವಾಮಿ ಆಗಿರುವ ಸಾಯಿ ಈಶ್ವರ ಗುರೂಜಿ ಎಂಬುವವರು ಇಂದು ಗುಡ್ಡಕುಸಿತವಾಗಿರುವ ಶಿರೂರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರು ಪೆಂಡೋಲಮ್ ಮತ್ತು ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್ ಮೂಲಕ ಸ್ಥಳದಲ್ಲಿ ತಪಾಷಣೆ ನಡೆಸಿದ್ದಾರೆ.
ಇದನ್ನೂ ಓದಿ
- ಡಿ ಕೆ ಶಿವಕುಮಾರ ಪಿಎಸ್ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
- ಉತ್ತರ ಕನ್ನಡದಲ್ಲಿ ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಏಕಾಂತ ಪೂಜೆ
- ಮಹಿಳಾ ಪೊಲೀಸ್ ಅಧಿಕಾರಿ ಕುತ್ತಿಗೆಯಿಂದ 60 ಗ್ರಾಂ ಚಿನ್ನ ಎಗರಿಸಿದ ಕಳ್ಳ
ಘಟನೆಯಲ್ಲಿ 17ಮಂದಿ ಸಾವನ್ನಪ್ಪಿದ್ದು, ಇನ್ನೂ 9 ಮಂದಿಯ ದೇಹಗಳಿವೆ. ಇನ್ನೂ ಗಂಗಾವಳಿ ನದಿಯ 24 ಅಡಿ ಆಳದಲ್ಲಿ ಲಾರಿ ಇದೆ. ಅಲ್ಲೆ ಹತ್ತಿರದಲ್ಲಿ ಒಂದು ದೇಹ ಸಹ ಇದೆ ಎಂದು ಹೇಳಿದ ಸ್ವಾಮಿಜಿ ಇನ್ನೂ ಎಂಟು ದೇಹಗಳು ಗಂಗಾವಳಿ ನದಿಯಲ್ಲಿ ಇರುವುದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.






