suddibindu.in
ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಶಿರೂರು ಬಳಿ ಗುಡ್ಡಕುಸಿತವಾಗಿರುವ ಸ್ಥಳಕ್ಕೆ ನಾಳೆ ರವಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ನೀಡಲಿದ್ದಾರೆ.
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಆಗಮಿಸಲಿದ್ದು,ಗುಡ್ಡ ಕುಸಿತವಾಗಿರುವ ಸ್ಥಳವೀಕ್ಷಣೆ ಮಾಡಲಿದ್ದು, ನಂತರದಲ್ಲಿ ಅಂಕೋಲಾ ಕಾರವಾರ ಭಾಗದಲ್ಲಿ ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಕ್ಕೂ ಕೂಡ ಸಿಎಂ ಭೇಟಿ ನೀಡಲಿದ್ದಾರಂತೆ. ಇವರ ಜೊತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ,ಆರ್ ವಿ ದೇಶಪಾಂಡೆ, ಶಾಸಕರಾದ ಭೀಮಣ್ಣ ನಾಯ್ಕ ಜೊತೆಗಿರಲಿದ್ದಾರೆ.
ಇದನ್ನೂ ಓದಿ
- ಇಂದಿನ ರಾಶಿಫಲ —ನಿತ್ಯದ ಪಂಚಾಂಗ
- ಇಂದಿನ ರಾಶಿಫಲ ಹಾಗೂ ನಿತ್ಯದ ಪಂಚಾಂಗ
- ಮಗನಿಗೆ ಬಾತ್ರೂಮ್ನಲ್ಲಿ ಕೂಡಿ ಹಾಕಿ ತಂದೆಯಿಂದ ಚಿತ್ರಹಿಂಸೆ : ಹೆಗಡೆಯಲ್ಲಿ ಘಟನೆ
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಸಹ ಶಿರೂರು ಗುಡ್ಡಕುಸಿತ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.





