suddibindu.in
ಅಂಕೋಲಾ: ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಟಿಂಬರ್ ಲಾರಿ ಸಿಲುಕಿಕೊಂಡಿರುವುದು ಕಾರ್ಯಚರಣೆ ಸಮಯದಲ್ಲಿ ಪತ್ತೆಯಾಗಿದೆ ಎನ್ನಲಾಗಿದ್ದು ಈ ಕ್ಷಣದವರೆಗೂ ಸಹ ಚಾಲಕನ ಮೊಬೈಲ್ ಲೊಕೇಷನ್ ಅದೇ ಸ್ಥಳದಲ್ಲಿ ಸಿಗುತ್ತಿದೆ ಎನ್ನಲಾಗಿದೆ.
ಘಟನೆಯ ದಿನದಂದು ಹಳಿಯಾಳದಿಂದ ಕೇರಳಕ್ಕೆ ಟಿಂಬರ್ ಸಾಗಿಸುತ್ತಿದ್ದ ಬೆಂಜ್ ಲಾರಿ KA 15, A 7427 ( ಸಾಗರ ನೋಂದಣಿ ಹೊಂದಿದ್ದು) ಶಿರೂರು ಬಳಿ ನಡೆದ ದುರಂತದಲ್ಲಿ ಸಿಲುಕಿಕೊಂಡಿತ್ತು,ಅದರಲ್ಲಿ ಚಾಲಕ ಅರ್ಜುನ್ ಕೂಡ ಸಿಲುಕಿಕೊಂಡಿದ್ದ, ಘಟನೆಗೆ ಸಂಬಂಧಿಸಿ ಲಾರಿ ಕೇಳರ ಮೂಲದ ಮುಬಿನ್ ಎಂಬುವವರಿಗೆ ಸೇರಿದ್ದಾಗಿದೆ, ಈಗಾಗಲೇ ಘಟನಾ ಸ್ಥಳಕ್ಕೆ ಲಾರಿ ಮಾಲೀಕರು ಹಾಗೂ ಚಾಲಕನ ಸಂಬಂಧಿಕರು ಆಗಮಿಸಿದ್ದಾರೆ.
ಇದನ್ನೂ ಓದಿ
- PSI/ಪಿಎಸ್ಐ ಪತ್ನಿ ಆತ್ಮಹತ್ಯೆ
- ಯಲ್ಲಾಪುರ ಬಳಿ ಭೀಕರ ರಸ್ತೆ ದುರಂತ: ಬಸ್–ಲಾರಿ ಡಿಕ್ಕಿ, ಮೂವರು ಸಾವು – ಏಳು ಮಂದಿ ಗಂಭೀರ”
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
ಕಾರ್ಯಚರಣೆ ಸಮಯದಲ್ಲಿ ಮಣ್ಣಿನ ಅಡಿಯಲ್ಲಿ ಲಾರಿ ಇರುವ ಬಗ್ಗೆ ಜಿಲ್ಲಾಡಳಿತದಿಂದ ಲಾರಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ ಸಂಪೂರ್ಣವಾಗಿ ಲಾರಿಯನ್ನ ಹೊರ ತೆಗೆಯುವ ಸಾಧ್ಯತೆ ಇದೆ.