ಕುಮಟಾ:ತಕ್ಷಣ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹೆಲಿಕಾಪ್ಟರ್ ಮುಖಾಂತರ ಉತ್ತರ ಕನ್ನಡ ಜಿಲ್ಲೆಗೆ ಬರಬೇಕು, ಅಲ್ಲೇ ಕುಳಿತು 5 ಲಕ್ಷ ಪರಿಹಾರ ಘೋಷಣೆ ಮಾಡಿದರೆ ಏನೂ ಪ್ರಯೋಜನ ಇಲ್ಲ , ಸಾವಿರಾರು ಜನ ಮನೆ ಜಮೀನು ಕಳಿದುಕೊಂಡಿದ್ದನ್ನ ಹೆಲಿಕಾಪ್ಟರ್ ಮೂಲಕ ವೀಕ್ಷಣೆ ಕಾಡಬೇಕು, ತಕ್ಷಣ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು. ಜಿಲ್ಲೆ ಜನರ ಜೀವ – ಜೀವನದ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಬನ್ನಿ ಎಂದು ಅನಂತ ಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ ದುರಂತ ನಡೆದು ಎರಡು ದಿನ ಕಳೆದಿದೆ. ಸುಮಾರು ಹತ್ತು ಜನರು ದುರಂತದಲ್ಲಿ ಮೃತಪಟ್ಟು ಕೆಲವರು ಮಣ್ಣಿನಡಿ ಸಮಾಧಿಯಾಗಿದ್ದಾರೆ. ಅಧಿವೇಶನ ನಡೆಯುತ್ತಿದ್ದರೂ ಇಂಥ ಸಂಧರ್ಭದಲ್ಲಿ ಮುಖ್ಯ ಮಂತ್ರಿ, ಉಪ ಮುಖ್ಯಮಂತ್ರಿ ಕಂದಾಯ ಸಚಿವರು ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಘಟನಾ ಸ್ಥಳಕ್ಕ ಆಗಮಿಸಿ ಪರಿಸ್ಥಿತಿ ಅವಲೋಕಿಸಬೇಕಿತ್ತು.ಅದರ ಜೊತೆಗೆ ಸೂಕ್ತ ಪರಿಹಾರ ಘೋಷಿಸಿ ಹೆದ್ದಾರಿ ಕಾಮಗಾರಿ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ನೀಡಬೇಕೆಂದು ಹೋರಾಟಗಾರ ಅನಂತಮೂರ್ತಿ ಹೆಗಡೆ ಒತ್ತಾಯಿಸಿದ್ದಾರೆ.