suddibindu.in
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಗುಡ್ಡ ಕುಸಿತದಲ್ಲಿ ಬೆಂಜ್ ಕಾರು ಹಾಗೂ ಲಾರಿಯೊಂದು ಸಿಲುಕಿಕೊಂಡಿರುವುದು ಜಿಪಿಎಸ್ನಿಂದ ಪತ್ತೆಯಾಹಿದ್ದು, ಮಣ್ಣಿನ ಅಡಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿಯ ಮೃತ ದೇಹಗಳು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.
ನಿನ್ನೆ ಶಿರೂರು ಬಳಿ ನಡೆದ ಗುಡ್ಡಕುಸಿತ ಘಟನೆಯಲ್ಲಿ ಬೆಂಜ್ ಕಾರಿನ ಜೊತಗೆ ಹಳಿಯಾಳದಿಂದ ಕೇರಳಕ್ಕೆ ಸಂಚರಿಸುತ್ತಿದ್ದ ಕೇಳರ ಮೂಲಕ ಶಿವಮೊಗ್ಗ ಜಿಲ್ಲೆಯ ಸಾಗರ ನೋಂದಣಿಯ KA 15, A 7427 ಸಂಖ್ಯೆ ಹೊಂದಿರುವ ಲಾರಿ ಸಿಲುಕಿಕೊಂಡಿರುವುದು ಖಾತ್ರಿ ಆಗಿದೆ. ಈಗಾಗಲೆ ಲಾರಿಯ ಮಾಲೀಕರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಲಾರಿಯ ಜಿಪಿಎಸ್ ಸಹ ಇದೆ ಸ್ಥಳದಲ್ಲಿ ಕಾಣಿಸುತ್ತಿದೆ ಎಂದು ಲಾರಿ ಮಾಲೀಕರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ
- Bhatkal/ಭಟ್ಕಳ ರಾಶಿ ರಾಶಿ ಮೂಳೆ ಪತ್ತೆ ಪ್ರಕರಣ : ಸುದ್ದಿ ಪ್ರಸಾರವಾಗುತಿದ್ದಂತೆ ಎಚ್ಚೆತ್ತ ಅಧಿಕಾರಿಗಳು
- ದಿನಕರರು ದೇಶ ವಿದೇಶಗಳಲ್ಲಿ ಕನ್ನಡವನ್ನು ಪಸರಿಸಿದ ಕನ್ನಡದ ಕಟ್ಟಾಳು : ರಮೇಶ್ ಗೌಡ ಕಡಮೆ
- ಶಾಸಕ ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು
ಈ ಲಾರಿ ಹಳಿಯಾಳದಿಂದ ಕೇರಳದ ಕಾಲಿಕತ್ತ,ಪ್ರಯಾಣಿಸುತ್ತಿತ್ತು ಎನ್ನಲಾಗಿದ್ದು,ಇದರ ಚಾಲಕ ಅರ್ಜುನ್ (30) ಮಣ್ಣಿನಲ್ಲಿಸಿಲುಕಿಕೊಂಡಿರುವುದಾಗಿ ಲಾರಿ ಮಾಲೀಕರು ಖಚಿತ ಪಡಿಸಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಮಣ್ಣಿನ ಅಡಿಯಲ್ಲಿ ಬೆಂಜ್ ಕಾರು
ಇನ್ನೂ ಬೆಂಜ್ ಕಾರೊಂದು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.ಇದನ್ನು ಕಾರಿಗೆ ಅಲಕವಡಿಸಲಾಗಿದ್ದ ಜಿಪಿಎಸ್ ಮೂಲಕ ಪತ್ತೆ ಹಚ್ಚಲಾಗಿದ್ದು ಕಾರಿಗೆ ಸಂಬಂದಪಟ್ಟವರು ಸ್ಥಳಕ್ಕೆ ಬಂದಿದ್ದಾರೆಂದು ಹೇಳಲಾಗುತ್ತಿದೆ. ಗುಡ್ಡ ಕುಸಿತದಲ್ಲಿ ಜೀವಕಳೆದುಕೊಂಡ ಈರ್ವರು ಶಿರಸಿ ನಗರಸಭೆಯ ಸದಸ್ಯ ನಾಗರಾಜ ನಾಯ್ಕ ಇವರ ಸಂಬಂದಿಗಳಾಗಿದ್ದಾರೆನ್ನಲಾಗಿದೆ.