suddibindu.in
Karwar: ಕಾರವಾರ: ಜಿಲ್ಲೆಯಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ಜನ-ಜೀವನ ಕೂಡ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶದಲ್ಲನ ಜನರನ್ನ ಎತ್ತರ ಪ್ರದೇಶಕ್ಕ ಸ್ಥಳಾಂತರ ಮಾಡಲಾಗಿದೆ.ಎತ್ತರದಲ್ಲಿದ್ದ ಹಾವುಗಳು ಈಗ ತಗ್ಗು ಪ್ರದೇಶವನ್ನ ಸೇರಿಕೊಳ್ಳತ್ತಿದೆ. ಕಾಡಿನಲ್ಲಿದ್ದ ಭಾರೀ ಗಾತ್ರದ ಹೆಬ್ಬಾವು ಮಳೆ ನೀರಿಗೆ ತೇಲಿ ಬಂದು ಮನೆ ಸೇರಿಕೊಂಡಿರುವ ಘಟನೆ ಕಾರವಾರ ನಗರದ ಸೋನಾರವಾಡದಲ್ಲಿ ನಡೆದಿದೆ.

ಕಾರವಾರದಲ್ಲಿ ಮನೆಯ ಬಳಿ ಮಳೆ ನೀರಿನಲ್ಲಿ ಬಂದ ಬೃಹತ್ ಗಾತ್ರದ ಹೆಬ್ಬಾವು ನಗರದ ಸೋನಾರವಾಡದ ಅರಣ್ಯ ಸಮೀಪದಲ್ಲಿದ್ದ ಮನೆಯೊಂದನ್ನ ಸೇರಿಕೊಂಡಿದೆ. ಸುಮಾರು 12 ಅಡಿ ಉದ್ದದ ಹೆಬ್ಬಾವು ಇದಾಗಿದ್ದು,ಬೃಹತ್ ಗಾತ್ರದ ಹಾವನ್ನ ನೋಡಿ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.ಮಳೆ ನೀರಿನಲ್ಲಿ ತೇಲಿ ಬಂದ ಈ ಹಾವು ಮನೆಯೊಳಗೆ ಸೇರಿಕೊಂಡಿದೆ.
ಇದನ್ನೂ ಓದಿ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
ತಕ್ಷಣ ಮನೆ ಮಾಲೀಕರು ಉರಗ ಪ್ರೇಮಿ ಗೋಪಾಲ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಬಂದ ಗೋಪಾಲ ಅವರು ಸುಮಾರು ಒಂದು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನ ರಕ್ಷಣೆ ಮಾಡಿದ್ದಾರೆ.




