suddibindu.in
ಕಾರವಾರ :ಬಾಡಿಗೆ ನೀಡಿದ ಜೆಸಿಬಿ(JCB) ಯಂತ್ರ ಬಾಡಿಗೆ ಹಣ ಹಣ ಕೇಳಿದ್ದಕ್ಕೆ ಜೆಸಿಬಿ ಬಾಡಿಗೆ ತೆಗೆದುಕೊಂಡವರು ಬಾಡಿಗೆ ಕೊಟ್ಟ ವ್ಯಕ್ರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಾಗಿರುವ ಘಟನೆ ಕಾರವಾರದಲ್ಲ ನಡೆದಿದೆ.
ಕಾರವಾರದ ತಾಲೂಕಿನ ಸಿದ್ಧರದ ಜ್ಞಾನೇಶ್ವರ ಕೋಳಂಬಕರ್ ಎಂಬಾತರಿಗೆ ಆನಂದ ನಾಯ್ಕ ನಾಲ್ಕು ತಿಂಗಳ ಅವಧಿಗೆ ಜೆಸಿಬಿ ಬಾಡಿಗೆಗೆ ನೀಡಿದ್ದರು. ಇದಕ್ಕೆ ಪ್ರತಿ ತಿಂಗಳು 1ಲಕ್ಷ ರೂ ನೀಡುವಂತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಜೆಸಿಬಿಯನ್ನು ಬಾಡಿಗೆ ತೆಗೆದುಕೊಂಡವರು ಹಣ ನೀಡಿರಲಿಲ್ಲ.
ಇದನ್ನೂ ಓದಿ
- ಕಾಸರಗೋಡು ಬಳಿ ಪ್ಲೈವುಡ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಓರ್ವ ಕಾರ್ಮಿಕ ಸಾವು, ಹಲವರಿಗೆ ಗಾಯ
- ಕರ್ನಾಟಕದಲ್ಲಿ ಬಿಜೆಪಿ ಹೊಸ ರಾಜಕೀಯ ಸಮೀಕರಣ: ಕುಮಾರಸ್ವಾಮಿ ಸುಪ್ರಿಂ
- ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ — ಹೆದ್ದಾರಿ ತಡೆದು ಆಕ್ರೋಶ
ಹಣ ಕೇಳಿದಾಗಲೆಲ್ಲ ಚೌಕಾಸಿ ಮಾಡುತ್ತಿದ್ದರು. ಈ ವಿಷಯವನ್ನು ಆನಂದು ನಾಯ್ಕ ಅಲ್ಲಲ್ಲಿ ಹೇಳಿಕೊಂಡಿದ್ದರು. ಇದರಿಂದ ಸಿಟ್ಟಾದ ಜ್ಞಾನೇಶ್ವರ್ ತನ್ನ ಸಹೋದರರಾದ ಗಣೇಶ ಕೋಳಂಬಕರ್, ಶಂಬು ಕೋಳಂಬಕರ್ ಹಾಗೂ ನೀಲೇಶ ಕೊಳಂಬಕರ್ ಎಂಬಾತರ ಜೊತೆ ಸೇರಿ ಆನಂದು ನಾಯ್ಕರಿಗೆ ಬೆದರಿಸಿದ್ದಾರೆ. ಜೀವ ಭಯದಿಂದ ಆನಂದು ನಾಯ್ಕ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು, ಅದೀಗ ಪೊಲೀಸರಿಗೆ ವರ್ಗವಾಗಿದೆ.







