suddibindu.in
ಶಿರಸಿ: ಕೇಂದ್ರ ಮೋಟಾರು ವಾಹನಗಳ ನಿಯಮ’ಗಳ ಅಡಿಯಲ್ಲಿ ಅನುಮತಿ ನೀಡಿರುವ ದೀಪಗಳನ್ನು (ಹೆಡ್ಲೈಟ್) ಮಾತ್ರ ವಾಹನಗಳಿಗೆ ಅಳವಡಿಸಬೇಕು. ಎಲ್ಇಡಿ ನಿರ್ಬಂಧಿಸಿರುವ ಬಗ್ಗೆ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಬಿಡ್ಕಿ ಬೈಲ್ ನಲ್ಲಿ ಬೈಕ್ ಸವಾರನೋರ್ವನಿಗೆ 5 ಸಾವಿರ ದಂಡ ವಿಧಿಸಲಾಗಿದೆ.
ಇದನ್ನೂ ಓದಿ
- Comedy Khiladigalu/ಕಾಮಿಡಿ ಕಿಲಾಡಿ’ ಚಂದ್ರಶೇಖರ್ ಸಿದ್ದಿ ಸಾವಿನ ಹಿಂದೆ ಪತ್ನಿಯ ಕಿರುಕುಳ ? ವಿಡಿಯೋ ವೈರಲ್
- ಅಕ್ರಮ ದಂಧೆಕೋರರರ ಪರ ನಿಂತ ಕನ್ನಡ ಪರ ಸಂಘಟನೆ ಅಧ್ಯಕ್ಷ : PSI ಎತ್ತಂಗಡಿಗೆ ಸಂಚು
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
ವಾಹನಗಳಿಗೆ ಹೆಚ್ಚಿನ ಪ್ರಖರತೆವುಳ್ಳ ಎಲ್ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸುವ ಪರಿಣಾಮವಾಗಿ ಎದುರು ಬರುವ ವಾಹನ ಸವಾರರಿಗೆ ಕಣ್ಣು ಕುಕ್ಕಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು ತಡೆಗಟ್ಟಲು ಸರಕಾರ ಮುಂದಾಗಿದೆ. ಶಿರಸಿ ನಗರದ ಬಿಡ್ಕಿ ಬೈಲ್ ನಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ಮತ್ತು ಸಿಬ್ಬಂದಿಗಳಾದ ಎಎಸ್ಐ ಹೊನ್ನಪ್ಪ,ನೆಲ್ಸನ್ ಮಂಥಾರೊ,ಹನಮಂತ ಕಬಾಡಿಯವರನ್ನೊಳಗೊಂಡ ತಂಡ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಎಲ್ಇಡಿ ಲೈಟ್ ಗಳನ್ನ ಅಳವಡಿಸಿದ್ದ ವಾಹನ ಸವಾರರ ಮೇಲೆ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ 5000 ರೂ ದಂಡ ವಿಧಿಸಲಾಗಿದೆ