suddibindu.in
ಕಾರವಾರ : ಗೋವಾದ ಖಾಸಗಿ ಬಸ್ನಲ್ಲಿ ಅಕ್ರಮವಾಗಿ ಕಪ್ಪೆಗಳನ್ನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಕಪ್ಪೆ ಸಾಗಾಟ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕಾಳಿ ಸೇತುವೆ ಬಳಿ ವಶಕ್ಕೆ ಪಡೆದಿದ್ದಾರೆ.
ಗೋವಾ ಬಸ್ನಲ್ಲಿ ಕಪ್ಪೆ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾರವಾರ ವಲಯದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಬಸ್ ಚಾಲಕ ಮತ್ತು ಮಾಲಕ ಸಿದ್ದೇಶ್ ಹಾಗೂ ಕ್ಲಿನರ್ ಜಾನು ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ
- ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ : ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
- ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿನ ಕೈ ಚಾಚುವಂತೆ ಮನವಿ
- ಹೊನ್ನಾವರದಲ್ಲಿ ಭೀಕರ ದುರಂತ: ಕಾರಿಗೆ ಬೆಂಕಿ, ಇಬ್ಬರು ಸಜೀವ ದಹನ
ನಗರದ ರಾಷ್ಟ್ರೀಯ ಹೆದ್ದಾರಿ 66ಕಾಳಿ ಸೇತುವೆ ಬಳಿ ಕಾದು ಕುಳಿತಿದ್ದ ಸಿಬ್ಬಂದಿಗಳು ಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. GA-08 V- 5859 ನೋಂದಣಿಯ ಖಾಸಗಿ ಬಸ್ ತಡೆದು ತಪಾಷಣೆ ಮಾಡಲಾಗಿದೆ. ಸಂದರ್ಭದಲ್ಲಿ ಬಸ್ ಡಿಕ್ಕಿಯಲ್ಲಿ ಚೀಲದೊಳಗೆ 43 ಬಾರೀ ಗಾತ್ರದ ಕಪ್ಪೆ ಇರುವುದು ಪತ್ತೆಯಾಗಿದೆ.
ತಕ್ಷಣ ಚಾಲಕ ಮತ್ತು ಕ್ಲಿನರ್ ನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಕಾರವಾರ ವಲಯ ಅರಣ್ಯಧಿಕಾರಿ ವಿಶ್ವನಾಥ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ಗೋವಾದಲ್ಲಿ ಕಪ್ಪೆಗಳಿಗೆ ಬೇಡಿಕೆ
ದೇಶದಲ್ಲಿ 400ಜಾತಿಯ ಕಪ್ಪೆಗಳಿದ್ದು ಇದು (Indian bull Frog)ಗೂಳಿ ಕಪ್ಪೆಗಳಾಗಿವೆ. ಗೋವಾದ ಹೊಟೇಲ್ಗಳಲ್ಲಿ ಕಪ್ಪೆಗಳಿಗೆ ಭಾರೀ ಬೇಡಿಕೆ ಇದ್ದು, ಮಳೆಗಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಿಂದ ಅಕ್ರಮವಾಗಿ ಕಪ್ಪೆಗಳನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಮೊದಲಿನಿಂದಲ್ಲು ಕಪ್ಪೆಗಳನ್ನ ಅಕ್ರಮವಾಗಿ ಸಾಗಟ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಈ ಹಿಂದೆ ಸಹ ಗೋವಾಕ್ಕೆ ಕಪ್ಪೆ ಸಾಗಾಟ ಮಾಡುವ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
.





