suddibindu.in
Dandeli :ದಾಂಡೇಲಿ : ನಗರದ ಟೌನಶಿಪ್’ನ(township) ಮನೆಯೊಂದರಲ್ಲಿ ಕಳ್ಳತನವಾಗಿರುವ ಘಟನೆ ಭಾನುವಾರ ನಸುಕಿನ ವೇಳೆಯಲ್ಲಿ ನಡೆದಿದೆ.
ಟೌನಶಿಪ್ ನಲ್ಲಿರುವ ಲತಾ ಉದಯ್ ಶೆಟ್ಟಿ ಅವರ ಮನೆಯ ಹತ್ತಿರದ ಮನೆಯೊಂದರಲ್ಲಿ ಲಲಿತಾ ಮೇಧಾ ಮತ್ತು ಅವರ ಪುತ್ರ ನಾಗರಾಜ್ ಮೇಧಾ ಅವರು ಬಾಡಿಗೆದಾರರಾಗಿ ವಾಸ್ತವ್ಯವಿದ್ದು, ಅವರು ಶನಿವಾರ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಈ ಇಬ್ಬರೂ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಭಾನುವಾರ ನಸುಕಿನ ವೇಳೆಯಲ್ಲಿ ಮನೆಯ ಹಿಂಭಾಗದ ಬಾಗಿಲಿನ ಚಿಲಕವನ್ನು ಮುರಿದು ಒಳ ನುಗ್ಗಿದ್ದಾರೆ. ಮನೆಯ ಒಳಗಡೆಯಿದ್ದ ಕಪಾಟಿನ ಬಾಗಿಲು ಮುರಿದು ಕಪಾಟಿನಲ್ಲಿದ್ದ( gold, cash ಚಿನ್ನದ ಒಡವೆ ಹಾಗೂ ನಗದನ್ನು ದೋಚಿದ್ದಾರೆ.
ಇದನ್ನೂ ಓದಿ
- ಪ್ರವಾಸಕ್ಕೆ ಬಂದಿದ್ದ ತಮಿಳುನಾಡು ಮೂಲದ ವ್ಯಕ್ತಿ ಗೋಕರ್ಣ ಕಡಲತೀರದಲ್ಲಿ ಕುಸಿದು ಬಿದ್ದು ಸಾವು
- ಸಚಿವ ಮಂಕಾಳ್ ವೈದ್ಯ ಅವರ ಸೂಚನೆ ಬೆನ್ನಲ್ಲೇ ಕುಮಟಾ–ಶಿರಸಿ ಹೆದ್ದಾರಿಯಲ್ಲಿ ಬಸ್ ಸಂಚಾರ ಆರಂಭ
- “ಕೈ ಹಾಕಿದವನಿಗೆ” ಕಪಾಳಮೋಕ್ಷ : ವಿಡಿಯೋ ವೈರಲ್
ಭಾನುವಾರ ಬೆಳಿಗ್ಗೆ ಎಂದಿನಂತೆ ಮನೆಗೆ ಮನೆ ಕೆಲಸದವರು ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲು ತೆರೆದಿದ್ದ ಹಿನ್ನೆಲೆಯಲ್ಲಿ ಅವರು ನಾಗರಾಜ ಮೇಧಾ ಅವರಿಗೆ ಮೊಬೈಲ್ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ನಾಗರಾಜ ಮೇಧಾ ಅವರು ಕೂಡಲೇ ಅವರ ಸಹೋದರರಾದ ಅದೇ ವಾರ್ಡಿನಲ್ಲಿ ವಾಸವಿರುವ ಅನಿಲ್ ಕೃಷ್ಣ ಮೇಧಾ ಅವರಿಗೆ ವಿಷಯವನ್ನು ತಿಳಿಸಿ ಮನೆಗೆ ಹೋಗಿ ನೋಡುವಂತೆ ಹೇಳಿದ್ದಾರೆ. ಅನಿಲ್ ಕೃಷ್ಣ ಮೇಧಾ ಅವರು ತಕ್ಷಣವೇ ಬಂದು ನೋಡಿದಾಗ ಕಳ್ಳತನವಾಗಿರುವುದು ಕಂಡುಬಂದಿದೆ. ಕೂಡಲೇ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.
ಸ್ಥಳಕ್ಕೆ ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸ್ಐ ಗಳಾದ ಐ.ಆರ್ ಗಡ್ಡೆಕರ್, ರವೀಂದ್ರ ಬಿರದಾರ ಹಾಗೂ ಪೊಲೀಸ್ (police)ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಎಷ್ಟು ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿದೆ ಎನ್ನುವ ಸ್ಪಷ್ಟ ಮಾಹಿತಿ ಲಲಿತಾ ಮೇಧಾ ಮತ್ತು ಅವರ ಪುತ್ರ ನಾಗರಾಜ್ ಮೇಧಾ ಅವರು ಬಂದ ನಂತರವಷ್ಟೇ ತಿಳಿದು ಬರಬೇಕಾಗಿದೆ.







