suddibindu.in
ಕುಮಟಾ : ಹೊನ್ನಾವರ ಕಡೆಯಿಂದ ಕಾರವಾರಕ್ಕೆ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಬರ್ಗಿ ಬಳಿ ಪಲ್ಟಿಯಾಗಿ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಕಾರವಾರ ಕೆಎಚ್‌ಬಿ ಕಾಲೋನಿಯ ಸಚಿನ್ ಶೇಟ್ ಎಂಬುವವರಿಗೆ ಸೇರಿರುವ ಕಾರು ಇದಾಗಿದ್ದು, ಇವರು ನಿನ್ನೆ ಧರ್ಮಸ್ಥಳದಿಂದ ಬಂದು ಕರ್ಕಿಯ ಸಂಬಂಧಿಕರ ಮನೆಯಲ್ಲಿ ಉಳಿದು ಕೊಂಡು ಇಂದು ಕಾರವಾರಕ್ಕೆ ವಾಪಸ್ ಆಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬರ್ಗಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಕುಮಟಾ ತಾಲೂಕಿನ ಬರ್ಗಿಯ ಘಟಬೀರ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಪಲ್ಟಿಯಾಗಿದೆ.
ಇದನ್ನೂ ಓದಿ
- ರಾಜ್ಯವನ್ನೆ ಬೆಚ್ಚಿಬೀಳಿಸಿದ ದುರಂತ: ಐಎಎಸ್ ಬಿಳಗಿ ಸೇರಿ ಮೂವರು ಸ್ಥಳದಲ್ಲೇ ಸಾವು

- ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ

- ಗರ್ಭಿಣಿ ಶ್ವಾನಕ್ಕೆ ಸಂಪ್ರದಾಯದ ಸೀಮಂತ : ಶಿಗ್ಲಿ ಮನೆಯ ವಿಶೇಷ ಪ್ರೀತಿ

ಕಾರಿನಲ್ಲಿ ಎಂಟು ತಿಂಗಳ ಗರ್ಭಿಣಿ ಸಹ ಪ್ರಯಾಣ ಮಾಡುತ್ತಿದ್ದು, ಕಾರಿನಲ್ಲಿದ್ದ ನಾಲ್ವರು ಕೂಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಪಲ್ಟಿಯಾಗಿರುವ ಕಾರನ್ನ ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ.




