suddibindu.in
ಶಿರಸಿ : ಪ್ರೀತಮ ಪಾಲನಕರ ಆತ್ಮಹತ್ಯೆ ಪ್ರಕರಣ ಹಾಗೂ ಕೆಡಿಸಿಸಿ ಬ್ಯಾಂಕ್ ನಕಲಿ ಕಾಗದ ಪತ್ರ ನೀಡಿ ಕಾರು ಖರೀದಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬ್ಲಾಕ್ ಮೇಲರ್ ರವೀಶ ಹೆಗಡೆ ಎಂಬಾತನನ್ನ ನೇಪಾಳದ ಕಡ್ಮಂಡುವಿನಲ್ಲಿ ಶಿರಸಿ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಈತ ಹಣ ಮಾಡುವ ಉದ್ದೇಶದಿಂದ ಅನೇಕರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನುವ ಆರೋಪ ಈ ಹಿಂದಿನಿಂದಲ್ಲೂ ಕೇಳಿ ಬಂದಿತ್ತು. ಅಕ್ಷಯ ಗಾರ್ಡನ ಮಾಲಕನಿಗೆ ಬ್ಲಾಕ್ ಮೇಲ್ ಮಾಡಿದ ಹಣ ವಸೂಲಿ ದಂಧೆ ಇಳಿದಿದ್ದ ಎನ್ನುವ ಆರೋಪ ಇದೆ. ಈತ ಕಿರುಕುಳಕ್ಕೆ ಪ್ರೀತಮ ಪಾಲನಕರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರುಗಳು ದಾಖಲಾಗಿದ್ದವು.ಆತನ ಬಂಧಿಸುವಂತೆ ನಗರದ ಹಲವು ಸಂಘಟನೆಗಳು ಒತ್ತಾಯ ಪಡಿಸಲಾಗಿತ್ತು.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಕಳೆದ ಕೆಲ ದಿನಗಳಿಂದ ಆರೋಪಿ ಬಂಧನಕ್ಕಾಗಿ ಶಿರಸಿ ಪೊಲೀಸರು ಹುಡುಕಾಟ ನಡೆಸಿದ್ದು, ಸಿ.ಪಿ.ಐ. ಶಶಿಕಾಂತ ವರ್ಮಾ ನೇತೃತ್ವದಲ್ಲಿ ಪಿ.ಎಸ್.ಐ. ನಾಗಪ್ಪ ಹಾಗೂ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಯನ್ನ ಹಿಡಿದು ತಂದಿದ್ದಾರೆ.