www.suddibindu.in
34
Kumta:ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಅಡಕವಾಗಿರುವ ಮತ ಯಂತ್ರಗಳು ಕುಮಟಾ ಪಟ್ಟಣದ ಡಾ 1ಎ ವಿ2ಬಾಳಿಗಾ ಕಾಲೇಜ್‌ನಲ್ಲಿರುವ ಸ್ಟ್ರಾಂಗ್ ರೂಮ್ ಸೇರಿದ್ದು, ಭದ್ರವಾಗಿದೆ
8ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8,23,604 ಪುರುಷರು, 8,17536 ಮಹಿಳೆಯರು ಮತ್ತು 16 ಇತರರು ಸೇರಿದಂತೆ ಒಟ್ಟು 16,41,156 ಮಂದಿ ಮತದಾರರಿದ್ದು, 1977 ಮತಗಟ್ಟೆಗಳಲ್ಲಿ ಮೇ 7ರಂದು ಮತದಾನ ನಡೆದಿತ್ತು. ಜಿಲ್ಲೆಯಲ್ಲಿ ಒಟ್ಟು 76.53,ರಷ್ಟು ಮತದಾನ ದಾಖಲಾಗಿದ್ದು, 12,56,027 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅದರಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 73,85, ಕಿತ್ತೂರಿನಲ್ಲಿ ಶೇ.76.27, ಹಳಿಯಾಳದಲ್ಲಿ ಶೇ. 75.91 , ಕಾರವಾರದಲ್ಲಿ ಶೇ. 73.63, ಕುಮಟಾದಲ್ಲಿ ಶೇ. 76.93, ಭಟ್ಕಳ ಶೇ.76, ಶಿರಸಿಯಲ್ಲಿ ಶೇ.80.48 ಮತ್ತು ಯಲ್ಲಾಪುರದಲ್ಲಿ ಶೇ.79.96ರಷ್ಟು ಮತದಾನವಾಗಿದೆ.
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
ಮತದಾರರ ಮತವು ಮತ ಪೆಟ್ಟಿಗೆ ಸೇರಿದ್ದು, ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕುಮಟಾ ಪಟ್ಟಣದ ಡಾ ಎ ವಿ ಬಾಳಿಗಾ ಕಾಲೇಜ್‌ನಲ್ಲಿರುವ ಸ್ಟ್ರಾಂಗ್ ರೂಮ್‌ಗೆ ಮತ ಪೆಟ್ಟಿಗೆಗಳನ್ನು ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬಂದಂತಹ ಮತ ಪೆಟ್ಟಿಗೆಗಳು ಮೇ.7ರ ರಾತ್ರಿಯೇ ಸ್ಟ್ರಾಂಗ್ ರೂಮ್ ಸೇರಿದ್ದರೆ, ಕಿತ್ತೂರು, ಖಾನಾಪುರ ಕ್ಷೇತ್ರದ ಮತ ಯಂತ್ರಗಳು ಬುಧವಾರ ಬೆಳಗ್ಗೆ ಸ್ಟ್ರಾಂಗ್ ರೂಮ್ ಸೇರಿವೆ. ಬಳಿಕ ಜಿಲ್ಲಾಧಿಕಾರಿ ಗಂಗೂಬಾಯಿ ಮಾನ್ಕರ್ ಅವರ ಉಪಸ್ಥಿತಿಯಲ್ಲಿಯೇ ಸ್ಟ್ರಾಂಗ್ ರೂಮ್ ಬಾಗಿಲ್‌ನ್ನು ಸೀಲ್ ಮಾಡಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಅಲ್ಲದೇ ಮತ ಏಣಿಕೆ ಕೇಂದ್ರದ ಸುತ್ತಲೂ ಸರ್ಪಗಾವಲಿನಂತೆ ಬೀಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು, ಪರವಾನಿಗೆ ಇಲ್ಲದೇ ಕೇಂದ್ರದೊಳಕ್ಕೆ ಯಾರನ್ನೂ ಸುಳಿಯದಂತೆ ಎಚ್ಚರ ವಹಿಸಲಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆ ಸೇರಿದ್ದು, ಜೂ. 4ರಂದು ನಡೆಯಲಿರುವ ಮತ ಏಣಿಕೆಯ ಫಲಿತಾಂಶ ಪ್ರಕಟವಾದ ಬಳಿಕವೇ ವಿಜಯ ಲಕ್ಷ್ಮೀ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ