suddibindu.in
ಕುಮಟಾ : ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಕಾರು ಚಾಲಕ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಸಮೀಪ ಖೈರಿ ಬಳಿರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
- Murudeshwar Beach/ಮುರುಡೇಶ್ವರ ಕಡಲತೀರಕ್ಕೆ ಜೀವಕಳೆ—ಬೋಟಿಂಗ್, ವಾಟರ್ ಸ್ಪೋರ್ಟ್ಸ್ ಆರಂಭ
- ಕುಮಟಾ ತಹಶೀಲ್ದಾರ ಕಚೇರಿಗೆ ಬಡಿದ ಸಿಡಿಲು : ಭೂಕಂಪನದ ಅನುಭವ
- ಬರ್ಗಿಯಲ್ಲಿ ಹೊಸ್ತಿನ ಹಬ್ಬದ ಧಾರ್ಮಿಕ ವೈಭವ
ಬೆಂಗಳೂರು ಮೂಲದ ಐವರು ಕಾರನಲ್ಲಿ ಅಂಕೋಲಾ ಕಡೆಯಿಂದ ಕುಮಟಾ ಕಡೆ ಪ್ರಯಾಣಿಸುತ್ತಿದ್ದರು,ಈ ವೇಳೆ ಮಿರ್ಜಾನ ಖೈರೆ ಕ್ರಾಸ್ ಬಳಿ ಯು ಟರ್ನ್ ಪಡೆಯುತ್ತಿದ್ದ ಟಿಪ್ಪರ್‌ಗೆ ಕಾರು ಹಿಂಬದಿಯಿಂದ ಡಿಕ್ಕಿಯಾಗಿದೆ. ಇದರಿಂದಾಗಿ ಕಾರು ಚಾಲಕ ಸೇರಿ ಮೂವರಿಗೆ ಗಂಭೀರ ಗಾಯವಾಗಿದೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರನ್ನ ತಕ್ಷಣ 108 ವಾಹನದ ಮೂಲಕ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಲಿತ್ಸೆ ನೀಡಲಾಗಿದೆ.
ಇನ್ನೂ ಅಪಘಾತದ ರಭಸಕ್ಕೆ ಕಾರ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರು ನುಜ್ಜುಗುಜ್ಜಾಗಿದೆ. ಅಪಘಾತದ ಸುದ್ದಿ ತಿಳಿದ ಕುಮಟಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವಾಗಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.