suddibindu.in
ಶಿವಮೊಗ್ಗ: ಉತ್ತರಕನ್ನಡ ಲೋಕಸಭಾ ಚುನಾವಣೆಯ ಉಸ್ತುವಾರಿ ಹೊಣೆಗಾರಿಕೆ ಹೊತ್ತಿದ್ದ ಮಾಜಿ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಸಂಸದ ಅನಂತಕುಮಾರ ಹೆಗಡೆ ಅವಾಂತರದಿಂದಾಗಿ ಉತ್ತರಕನ್ನಡ ಕನ್ನಡ ಜಿಲ್ಲೆಯ ಚುನಾವಣಾ ಉಸ್ತುವಾರಿಯಿಂದ ಕೈ ಬಿಡುವಂತೆ ಹೈಕಮಾಂಡ ಬಳಿ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.
ಸಂಸದ ಅನಂತಕುಮಾರ ಹೆಗಡೆ ಅವರಿಗೆ ಈ ಬಾರಿ ಲೋಕಸಭಾ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯ ಆಗಬಾದರು ಎನ್ನುವ ಉದ್ದೇಶದಿಂದ ಲೋಕಸಭಾ ಚುನಾವಣೆಯ ಉಸ್ತುವಾರಿ ವಹಿಸಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸಂಸದರ ಮನೆಗೆ ಬಂದು ಮಾತುಕತೆ ನಡೆಸಿರುವುದು ಹೈಕಮಾಂಡಗೂ ಗೊತ್ತಿರುವ ವಿಚಾರ ಹಾಗೂ ಮಾಧ್ಯಗಳಲ್ಲಿಯೂ ಈ ಸುದ್ದಿ ಪ್ರಸಾರವಾಗಿದೆ.. ಈ ವೇಳೆ ಸಂಸದರ ಮನೆಗೆ ಚುನಾವಣಾ ಉಸ್ತುವಾರಿ ಹಾಲಪ್ಪ ಅವರು ಭೇಟಿ ನೀಡಿ ಸಂಧಾನ ನಡೆಸಿದ್ದಾರೆ ಎನ್ನುವ ಕುರಿತಾಗಿ ಪಕ್ಷದ ಹೈಕಮಾಂಡ ಗಮನಕ್ಕೆ ತರಬೇರಬೇಕಾದ ಕಾರಣ ಹಾಲಪ್ಪ ಅವರ ಗನ್‌ಮ್ಯಾನ್ ಸಂಸದರ ಜೊತೆ ಹಾಲಪ್ಪ ಅವರು ಮಾತುಕತೆ ನಡೆಸುತ್ತಿರುವ ಪೊಟೋ ಕ್ಲಿಕಿಸಿದ್ದಾರೆ.
ಇದನ್ನೂ ಓದಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
- ಆಸ್ಪತ್ರೆಗೆ ಉಪಕರಣ ಕೊಡಿ, ನಂತರ ಉದ್ಘಾಟನೆಗೆ ಬನ್ನಿ: ಕಾಂಗ್ರೇಸ್ ಸರಕಾರಕ್ಕೆ ರೂಪಾಲಿ ನಾಯ್ಕ ಖಡಕ್ ಎಚ್ಚರಿಕೆ”
- ಭಾರತ ಸುತ್ತಲು ನೇಪಾಳದಿಂದ ಬಂದ ಸೈಕಲ್ ಯಾತ್ರಿ : ಕಾರವಾರದಲ್ಲಿ ಬಿಡಾರ
ಹಾಲಪ್ಪ ಅವರ ಗನ್‌ಮ್ಯಾನ್ ಪೊಟೋ ತೆಗೆದಿರುವುದನ್ನ ಗಮನಿಸಿದ ಹಿರಿಯ ಸಂಸದರಾಗಿದ್ದ ಮಾಜಿ ಸವರು ಆಗಿರುವ ಅನಂತಕುಮಾರ ಅವರು ಗನ್‌ಮ್ಯಾನ್ ಅವರಿಗೆ ತನ್ನ ಬಳಿ ಕರೆದುಕೊಂಡು ಪೊಟೋ ತೆಗೆದಿರುವ ಬಗ್ಗೆ ಪ್ರಶ್ನಿಸಿ ಚುನಾವಣಾ ಉಸ್ತುವಾರಿಯಾಗಿದ್ದ ಹರತಾಳು ಹಾಲಪ್ಪ ಅವರ ಎದುರು ಆ ಗನ್‌ಮ್ಯಾನ್ ಅವರಿಗೆ ಕಪಾಳಮೋಕ್ಷ ಮಾಡಿರುವ ಬಗ್ಗೆ ಬಿಜೆಪಿ ಪಡಸಾಲೆಯಲ್ಲಿಯೇ ದೊಡ್ಡ ಚರ್ಚಿತ ವಿಚಾರವಾಗಿದೆ.
ಘಟನೆ ನಂತರದಲ್ಲಿ ಹೊರ ನಡೆದ ಹಾಲಪ್ಪ ಅವರು ತಮ್ಮಆಪ್ತರ ಬಳಿ ಸಾಕಪ್ಪ ಈ ಜಿಲ್ಲೆಯ ಉಸ್ತುವಾರಿ ಎಂದು ಹೇಳಿದ್ದರು. ಆದರೆ ಆಗ ಹಾಲಪ್ಪ ಅವರು ಯಾಕಾಗಿ ಈರೀತಿ ಹೇಳತ್ತಿದ್ದಾರೆ ಅನ್ನೊಂದು ಗೊತ್ತಾಗಿರಲಿಲ್ಲ.ಅವರು ಜಿಲ್ಲೆಯಿಂದ ಹೋದ ಬಳಿಕ ಕಪಾಳಮೋಕ್ಷದ ಕಥೆ ಹೊರಬಿದ್ದಿದೆ. ಈ ಎಲ್ಲಾ ಘಟನೆಯಿಂದಾಗಿ ಬಿಜೆಪಿ ಪಾಲಿಗೆ ಉತ್ತರಕನ್ನಡ ಜಿಲ್ಲೆ ಉತ್ತರ ಕಾಣದಂತಾಗಿದೆ.





