suddibindu.in
ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಜ್ಜಾಗುತ್ತಿದ್ದು, ಕಾಂಗ್ರೆಸ್ ಪಕ್ಷ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು ಸ್ವಾಗತಾರ್ಹ. ಅವರು ಕೋಮುವಾದಿ ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಮಣಿಸಲು ಸಶಕ್ತರಾಗಿದ್ದಾರೆ.ನಿಂಬಾಳ್ಕರ್ ಆಯ್ಕೆ ನೂರಕ್ಕೆ ನೂರರಷ್ಟು ಖಚಿತ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಎಚ್. ನಾಯ್ಕ ಕಾಗಾಲ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಾಗಿರದೇ ಪ್ರಜಾಪ್ರಭುತ್ವ ಮತ್ತು ಅಸಹಾಯಕ ಧ್ವನಿಗಳ ಗೆಲುವು ಕೂಡ ಆಗಿರಲಿದೆ. ಈ ಬಾರಿ ಅಂಜಲಿ ನಿಂಬಾಳ್ಕರ್ ಅವರನ್ನು ಅತಿ ಹೆಚ್ಚು ಮತಗಳ ಅಂತರದಿAದ ಗೆಲ್ಲಿಸಿ ಭಾರತ ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಕನ್ನಡ ಕ್ಷೇತ್ರ ಉಡುಗೊರೆ ನೀಡಲಿದೆ ಎಂದು ಆರ್.ಎಚ್.ನಾಯ್ಕ ತಿಳಿಸಿದ್ದಾರೆ.
ಇದನ್ನೂ ಓದಿ
- ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ : ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
- ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿನ ಕೈ ಚಾಚುವಂತೆ ಮನವಿ
- ಹೊನ್ನಾವರದಲ್ಲಿ ಭೀಕರ ದುರಂತ: ಕಾರಿಗೆ ಬೆಂಕಿ, ಇಬ್ಬರು ಸಜೀವ ದಹನ
ಅಂಜಲಿ ನಿಂಬಾಳ್ಕರ್ ಅವರು ಖಾನಾಪುರ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆ ಆಗಿ ಜನಪರ ಶಾಸಕಿ ಎಂಬ ಘನತೆಗೆ ಪಾತ್ರರಾಗಿದ್ದಾರೆ.ಇದೀಗ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಂಸದರಾಗಿ ಆಯ್ಕೆ ಆದರೆ ಈ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯತೆ ಇದೆ. ವೃತ್ತಿಯಲ್ಲಿ ವ್ಯದ್ಯರಾದ ನಿಂಬಾಳ್ಕರ್ ಅವರು ತಾವು ಆಯ್ಕೆ ಆದಲ್ಲಿ ಜಿಲ್ಲೆಗೆ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸರಕಾರದಿಂದ ಖಂಡಿತ ಮಂಜೂರಿ ಮಾಡಿಸಿ ಇಷ್ಟು ವರ್ಷಗಳ ಜನರ ಕೂಗಿಗೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿರುವುದು ಅವರ ದೂರದೃಷ್ಟಿತ್ವದ ನಾಯಕತ್ವಕ್ಕೆ ಸಾಕ್ಷಿ ಎಂದು ಆರ್.ಎಚ್.ನಾಯ್ಕ ಹೇಳಿದ್ದಾರೆ.
ಕಳೆದ ಆರು ಅವಧಿಯಲ್ಲಿ ಸಂಸದರಾಗಿ ಆಯ್ಕೆ ಆದ ಅನಂತ ಕುಮಾರ ಹೆಗಡೆ ಸುಳ್ಳು ಹೇಳುತ್ತ, ಕೋಮುದ್ವೇಷ ಯುವಕರ ಮೆದುಳಿನಲ್ಲಿ ತುರುಕಲು ಪ್ರಯತ್ನಿಸುತ್ತ ದರಬಾರು ಮಾಡಿದರೇ ಹೊರತು ಜಿಲ್ಲೆಗಾಗಿ ಏನೂ ಮಾಡಿಲ್ಲ. ಇಷ್ಟು ವರ್ಷ ನಿದ್ದೆ ಮಾಡುತ್ತಿದ್ದ ಹೆಗಡೆ ಇದೀಗ ಮತ್ತೆ ಹಾಸಿಗೆಯಿಂದ ಎದ್ದು ಬಂದು ಧರ್ಮಾಂಧತೆಯ ಬಗ್ಗೆ ವಿಷ ಕಕ್ಕಿ ಹೊಸ ತಲೆಮಾರನ್ನು ದಿಕ್ಕು ತಪ್ಪಿಸುವಲ್ಲಿ ನಿರತರಾಗಿದ್ದಾರೆ. ಜನ ಅನಂತ ಕುಮಾರ್ ಹೆಗಡೆ ಅವರ ಉದ್ರೇಕಕಾರಿ ಭಾಷಣಕ್ಕೆ ಗಮನಕೊಡದೇ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸುವುದರ ಮೂಲಕ ಉತ್ತರ ಕನ್ನಡವನ್ನು ಗೆಲ್ಲಿಸಬೇಕು ಎಂದು ಆರ್.ಎಚ್.ನಾಯ್ಕ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ,





