suddibindu.in
mundgod:ಮುಂಡಗೋಡ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ವ್ಯಕ್ತಿಯೊಬ್ಬನ ಸಹಜ ಸಾವು ಎಂದು ತಿಳಿದು ಅಂತ್ಯಕ್ರಿಯೆ ಮಾಡಿ ಹದಿನೈದು ದಿನದ ಬಳಿಕ ಪತ್ನಿಯೇ ಪತಿಯ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು. ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಲಂಬಾಣಿ ತಾಂಡಾದ ಟೋಪನ್ ಜಗನಪ್ಪ ಲಮಾಣಿ(44) ಎಂಬವನೆ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಶಾಂತವ್ವ ಲಮಾಣಿ ಬಂಧಿತ ಆರೋಪಿಯಾಗಿದ್ದಾಳೆ.. ಕುಡಿತದ ಚಟ ಹೊಂದಿದ್ದ ಟೋಪಣ್ಣ ಪ್ರತಿ ದಿನವೂ ಮದ್ಯ ಸೇವನೆ ಮಾಡುತ್ತಿದ್ದ. ಎಂದಿನಂತೆ ಮದ್ಯ ಸೇವನೆ ಮಾಡಿ ಮನೆಗೆ ಬಂದಿದ್ದ ಗಂಡನು ಮನೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪತ್ನಿ ಶಾಂತವ್ವ ಸುದ್ದಿ ಬಿಂಬಿಸಿದ್ದಳು ಅದನ್ನೆ ನಿಜವೆಂದು ನಂಬಿ ಹಿರಿಯರು ಟೋಪಣ್ಣನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು.
ಇದನ್ನೂ ಓದಿ:-
- ಅಪಘಾತ ನಿಯಂತ್ರಣಕ್ಕೆ ಕುಮಟಾದಲ್ಲಿ ಬಿಗ್ ಆಕ್ಷನ್ : ನಿಯಮ ಮೀರಿ ವಾಹನ ಓಡಿಸಿದ್ರೆ ಕಾನೂನು ಕ್ರಮ
- ಸುಗಮವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ಎಸ್ಪಿಗೆ ರೂಪಾಲಿ ನಾಯ್ಕ ಮನವಿ
- ದಿನಕರ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ
ಆದರೆ ಶಾಂತವ್ವ ದಿನಗಳು ಕಳೆದಂತೆ ಪ್ರತಿ ದಿನವೂ ಮೊಬೈಲ್ ನಲ್ಲಿ ಬೇರೆಯ ವ್ಯಕ್ತಿಯ ಜೊತೆ ಮಾತನಾಡುತ್ತಾ ಗಂಡನ ಮರ್ಮಾoಗವನ್ನು ಹಿಚುಕಿ ಕೊಲೆ ಮಾಡಿದ್ದೇನೆ ಎಂದು ಹೇಳುವುದನ್ನು ಕೇಳಿಸಿಕೊಂಡ ಅಕ್ಕ ಪಕ್ಕದ ಮನೆಯವರು ಸಮಾಜದ ಹಿರಿಯರಿಗೆ ವಿಷಯ ತಿಳಿಸಿದ್ದಾರೆ. ನಂತರ ಹಿರಿಯರು ಸಭೆ ಸೇರಿ ಶಾಂತವ್ವ ಮೊಬೈಲ್ ಪೋನ್ ತಪಾಸಣೆ ಮಾಡಿ ವಿಚಾರಿಸಿದಾಗ ಗಂಡನ ಮರ್ಮಾಂಗವನ್ನು ಹಿಚುಕಿ ಸಾಯಿಸಿದ್ದೇನೆ ಎಂದು ಒಪ್ಪಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶಾಂತವ್ವಳನ್ನು ಬಂಧಿಸಿದ್ದಾರೆ.