ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ಕಾರವಾರದಿಂದ ಮುಂಡಗೋಡಕ್ಕೆ ಹೋಗುತ್ತಿದ್ದ‌ ಬೈಕ್ ಸವಾರನೋರ್ವನಿಗೆ ಟ್ಯಾಂಕರ್ ‌ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅರಬೈಲ್ ಸಮೀಪ ನಡೆದಿದೆ..

ಅಪಘಾತದಲ್ಲಿ ಪರಶುರಾಮ ಎಂಬಾತನೆ ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ. ಈತ ಕಾರವಾರದಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಈತನ ಅಕ್ಕ ಮುಂಡಗೋಡದಲ್ಲಿ ಪೊಲೀಸ್ ಆಗಿ‌ ಕಾರ್ಯನಿರ್ವಹಿಸುತ್ತಿದ್ದು, ಈತ ಅಕ್ಕನನ್ನು ನೋಡಲೆಂದು ಕಾರವಾರದಿಂದ ಮುಂಡಗೋಡಕ್ಕೆ ಹೋಗುತ್ತಿದ್ದ‌ ಎನ್ನಲಾಗಿದೆ. ಈ ವೇಳೆ ಯಲ್ಲಾಪುರ ಕಡೆಯಿಂದ ಅಂಕೋಲಾ‌ ಕಡೆ ಬರುತ್ತಿದ್ದ ಡಾಂಬರ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.