ಸುದ್ದಿಬಿಂದು ಬ್ಯೂರೋ
ಕಾರವಾರ
: ನಾಳೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಗೋವಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ನಾಳೆ ಮೇ 10ಕ್ಕೆ ಕರ್ನಾಟಕಕ್ಕೆ ಮತದಾನಕ್ಕೆ ತೆರಳಲು ವೇತನ ಸಹಿತ ರಜೆ ಘೋಷಿಸಿ ಗೋವಾ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗೋವಾದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ವಾಸಿಸುತ್ತಿದ್ದು, ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕರ್ನಾಟಕದಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂದು ಗೋವಾ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಗೋವಾ ಸರ್ಕಾರ ಕೈಗಾರಿಕಾ ಕಾರ್ಮಿಕರು, ಸರ್ಕಾರಿ ಇಲಾಖೆಗಳಲ್ಲಿ ದಿನನಿತ್ಯದ ನೌಕರರು, ರಾಜ್ಯ ಸರ್ಕಾರದ ಕೈಗಾರಿಕಾ ಇಲಾಖೆಗಳು, ವೃತ್ತಿಪರರು ಮತ್ತು ಖಾಸಗಿ ಸಂಸ್ಥೆಗಳ ಕೈಗಾರಿಕಾ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಿದೆ.ಇದರಿಂದಾಗಿ ಗೋವಾದಲ್ಲಿ ಕಾರ್ಯನಿರ್ವಹಣೆ‌ ಮಾಡುತ್ತಿರುವ ನೌಕರರು ಹಾಗೂ ಕಾರ್ಮಿಕರು ಇಂದು ಸಂಜೆಯಿಂದಲ್ಲೆ ಕರ್ನಾಟಕದತ್ತ‌‌ ಮುಖಮಾಡುತ್ತಿದ್ದಾರೆ.