ಕಾರವಾರಃ ಕಾರವಾರದಲ್ಲಿ ನಡೆಯಲಿರುವ ಕರಾವಳಿ ಉತ್ಸವದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಚರ್ಚೆ ನಡೆಸಿದರು.
ಮಂಗಳವಾರ ಬನವಾಸಿಯಲ್ಲಿನ ಕದಂಬೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ರೂಪಾಲಿ ಎಸ್.ನಾಯ್ಕ, ಕರಾವಳಿ ಉತ್ಸವ ಆಚರಣೆ ಕುರಿತು ಮಾತುಕತೆ ನಡೆಸಿದರು.

ನಂತರ ರೂಪಾಲಿ ಎಸ್.ನಾಯ್ಕ, ಕದಂಬೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಇತರ ಸಚಿವರು, ಗಣ್ಯರೊಂದಿಗೆ ಪಾಲ್ಗೊಂಡರು. ಇದಲ್ಲದೆ, ಮಧುಕೇಶ್ವರ ದೇವರ ರಥವನ್ನು ಲೋಕಾರ್ಪಣೆಗೊಳಿಸುವ ಸಮಾರಂಭದಲ್ಲೂ ಪಾಲ್ಗೊಂಡರು.
ಇದಕ್ಕೂ ಮುನ್ನ ಮಧುಕೇಶ್ವರ ದೇವಾಲಯಕ್ಕೆ ತೆರಳಿದ ರೂಪಾಲಿ ಎಸ್.ನಾಯ್ಕ ಪೂಜೆ ಸಲ್ಲಿಸಿದರು.