ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ವಾಹನ ಡಿಕ್ಕಿ ವಿಚಾರವಾಗಿ ಅಯ್ಯಪ್ಪ ಮಾಲಾದಾರಿಗಳು ಮತ್ತು ನೌಕಾ ಸೇನೆಯ ಸಿಬ್ಬಂದಿ ನಡುವೆ ನಡೆದ ಮಾತಿನ ಚಕಮಕಿ ಉಂಟಾಗಿ ನೌಕಾ ನೆಲೆ ಸಿಬ್ಬಂಬಂದಿಗಳು ಅಯ್ಯಪ್ಪ ಮಾಲಾದಾರಿಗಳ ಹಲ್ಲೆ ಹಲ್ಲೆ ಮಾಡಿರುವ ಘಟನೆ ರವಿವಾರ ರಾತ್ರಿ ಉತ್ತರಕನ್ನಡ ಜಿಲ್ಲೆಯ ಮುದಗಾ ಬಳಿ ನಡೆದಿದೆ.
ರಾತ್ರಿ ವೇಳೆ ಅಯ್ಯಪ್ಪ ಮಾಲಾದಾರಿಗಳು ಪ್ರಯಾಣಿಸುತ್ತಿದ್ದ ವಾಹನ ಹಾಗೂ ನೌಕಾನೆಲೆಯ ಸಿಬ್ಬಂದಿಗಳ ವಾಹನದ ನಡುವೆ ಅಪಘಾತ ಉಂಟಾಗಿ ಅಯ್ಯಪ್ಪ ಮಾಲಾದಾರಿಯಲ್ಲಿನ ಗುರುಸ್ವಾಮಿ ಎಂಬುವವ ಕಾಲಿ ಗಾಯವಾಗಿತ್ತು.ಹೀಗಾಗಿ ಅವರನ್ನ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯದ್ದು, ಚಿಕಿತ್ಸೆ ಕೊಡಿಸಿ ವಾಪಸ್ ಬರುತ್ತಿದ್ದ ವೇಳೆ ಮುದಗಾ ಬಳಿ ನೌಕಾನೆಲೆಯ ಸಿಬ್ಬಂದಿಗಳು ಅಯ್ಯಪ್ಪ ಮಾಲಾದಾರಿಗಳ ವಾಹನವನ್ನ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆನ್ನಲಾಗಿದೆ.
ಈ ವೇಳೆ ಅಯ್ಯಪ್ಪ ಮಾಲಾಧಾರಿಗಳ ಮೇಲೆ ನೌಲೆ ಸೇನೆಯ ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಎನ್ನುವ ಸುದ್ದಿ ತಿಳಿದ ಸ್ಥಳೀಯರು ರಾತ್ರಿಯೆ ಮುದಾಗ ಬಳಿ ಜಮಾಯಿಸಿ ನೌಕಾ ನೆಲೆ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇವತ್ತು ಮುಂಜಾನೆ ಸಹ ಸ್ಥಳೀಯರಯ ನೌ ಸೇನೆಯ ಸಿಬ್ಬಂದಿ ಇರುವ ವಸತಿಗೃಹದ ಗೇಟ್‌ಗೆ ಮುತ್ತಿಗೆ ಹಾಕಲು ಯತ್ನಸಿದ್ದು,ಸ್ಥಳಕ್ಕೆ ಆಗಮಿಸಿದ ಕಾರವಾರ ಪೊಲೀಸರು ಪ್ರತಿಭಟನಾಕಾರರನ್ನ ಸಮಧಾನ ಪಡಿಸುವ ಕೆಲಸ ಮಾಡುತ್ತಿದ್ದಾರೆ.
ಗಮನಿಸಿ