ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಬೀಚ್ನಲ್ಲಿ ಮತ್ತೆ ಮರುಕಳಿಸಿರುವ ದುರಂತ ಸಾವುಗಳಿಂದಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಹೈಕೋರ್ಟ್ ನ್ಯಾಯವಾದಿ ನಾಗ್ರೇಂದ್ರ ನಾಯ್ಕ ಅವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಚ್.ವಿ. ಮತ್ತು ಅವರ ವಿರುದ್ಧ ಭಟ್ಕಳ ಮೂಲದ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2020-25, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು, ಮತ್ತು ವಿಪತ್ತು ನಿರ್ವಹಣಾ ಕಾಯಿದೆ 2005 ಅನ್ನು ಉಲ್ಲಂಘಿಸಿದ್ದಾಗಿ ಆಕ್ಷೇಪಿಸಿದೆ. ಡಿ.11ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ಮೊರಾರ್ಜಿ ದೇಸಾಯಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು. ಇದೇ ಬೀಚ್ನಲ್ಲಿ ಅ.6ರಂದು 17 ವರ್ಷದ ಪ್ರಿ-ಯೂನಿವರ್ಸಿಟಿ ವಿದ್ಯಾರ್ಥಿಯು ಮೃತಪಟ್ಟ ಘಟನೆ ಕೂಡ ಈ ದೂರುನಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿ ವರ್ಷ ಮುರುಡೇಶ್ವರ ಬೀಚ್ನ ಜಲಕ್ರೀಡೆ ಚಟುವಟಿಕೆಗಳಿಂದ 3.5 ಕೋಟಿ ರೂ. ಆದಾಯ ಗಳಿಸುವ ಅಧಿಕಾರಿಗಳು, ಅವುಗಳಿಂದ ಜೀವ ರಕ್ಷಣೆ ಮತ್ತು ಸುರಕ್ಷತೆಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೀಚ್ನಲ್ಲಿ ಜೀವ ರಕ್ಷಕ ಸಾಧನಗಳು, ಕಾವಲು ಗೋಪುರಗಳು, ಜೀವರಕ್ಷಕರು ಮತ್ತು ತುರ್ತು ಪ್ರತಿಕ್ರಿಯಾ ಕ್ರಮಗಳು ಕಾಣದಂತಿವೆ. ಕರ್ನಾಟಕ ಪ್ರವಾಸೋದ್ಯಮ ನೀತಿ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಂತೆ ನಿಯಮಾವಳಿ ಜಾರಿಗೆ ವಿಫಲತೆ. ಬೀಚ್ನಲ್ಲಿ ನಡೆದ ಮನುಷ್ಯನಿರ್ಮಿತ ದುರಂತಗಳು ಆಡಳಿತದ ನಿರ್ಲಕ್ಷ್ಯದ ಉತ್ಕೃಷ್ಟ ಉದಾಹರಣೆಗಳಾಗಿವೆ. ಪ್ರವಾಸೋದ್ಯಮ ಚಟುವಟಿಕೆಗಳಿಂದ ವಾರ್ಷಿಕ 3.5 ಕೋಟಿ ರೂಪಾಯಿ ಆದಾಯ ಸಿಗುತ್ತಿದ್ದರೂ, ಹಣವನ್ನು ಸುರಕ್ಷತಾ ಕ್ರಮಗಳಿಗೆ ವಿನಿಯೋಗಿಸಲು ವಿಫಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಯಂತ್ ಎಚ್.ವಿ. ಮತ್ತು ಲಕ್ಷ್ಮಿ ಪ್ರಿಯಾ ಅವರ ವಿರುದ್ಧ BNS ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು), 125 (ಜೀವಕ್ಕೆ ಅಪಾಯವುಂಟು ಮಾಡುವ ವರ್ತನೆ), ಮತ್ತು IPC ಸೆಕ್ಷನ್ 503 (ಹಾನಿ ಮಾಡುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಗಮನಿಸಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
- ಭಟ್ಕಳದ ಹಳೆಯ ಕಾಲ ಮುಕ್ತಾಯ – ನಗರಸಭೆಯ ಹೊಸ ಯುಗ ಆರಂಭ ! ಮಂಕಾಳು ವೈದ್ಯ ಸಚಿವರಾದ ಬಳಿಕ ಭಟ್ಕಳಿಗರ ಕನಸು ನನಸು