suddibindu.in
Karwar:ಕಾರವಾರ : ಅರಬ್ಬೀ ಸಮುದ್ರದಲ್ಲಿ ಕಡಲ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಹಾರವಾಡದ ತರಂಗಮೇಟ್‌ನಲ್ಲಿ ಮನೆಯೊಂದು ಕೊಚ್ಚಿಹೋಗಿರುವ ಘಟನೆ ನಡೆದೆ.ಈ ಕುರಿತಾಗಿ ಸ್ಥಳೀಯ ಶಾಸಕರಾಗಿರುವ ಸತೀಶ್ ಸೈಲ್ ಅವರು ತಕ್ಷಣ ಸಿ ಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಘಟನೆಯ ಕುರಿತಾಗಿ ವಿವರಿಸಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಅರಬ್ಬೀ ಸಮುದ್ರದಲ್ಲಿ ಕಡಲ ಅಲೆಯ ಅಬ್ಬರ ಜೋರಾಗಿದೆ. ಇದರಿಂದಾಗಿ ಹಾರವಾಡದ ತರಂಗಮೇಟ ನಿವಾಸಿಯಾಗಿರುವ ಅಶೋಕ್ ಹರಿಕಂತ್ರ ಎಂಬುವವರ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿರುವ ಶಾಸಕ ಸತೀಶ್ ಸೈಲ್ ಅವರು ವಿಷಯ ತಿಳಿದು ತಕ್ಷಣ ಜಿಲ್ಲೆಯ ಅಧಿಕಾರಿಗಳ ಜೊತೆ ಮಾಹಿತಿಯನ್ನ ಪಡೆದು ತಕ್ಷಣ ಸಿ ಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಸಮಸ್ಯೆ ಕುರಿತಾಗಿ ತಿಳಿಸಿದ್ದಾರೆ.
ಇದನ್ನೂ ಓದಿ
- ಕಾರವಾರ ದೇವಭಾಗ ಬೀಚ್ನಲ್ಲಿ ಅದ್ಭುತ ನೋಟ! ರಾಶಿ ರಾಶಿ ಮೀನು ದಡಕ್ಕೆ
- Bigg Boss/ಬಿಗ್ ಬಾಸ್ ಮನೆಗೆ ತಾತ್ಕಾಲಿಕ ಬೀಗ ಜಡಿದ ಅಧಿಕಾರಿಗಳು
- “105 ವರ್ಷಗಳ ಬಳಿಕ ಕೆಡಿಸಿಸಿ ಬ್ಯಾಂಕ್ನ ಇತಿಹಾಸದಲ್ಲಿ ದಿಟ್ಟ ಮಹಿಳೆಯ ಹೊಸ ಅಧ್ಯಾಯ”
ಶಿರೂರು ಗುಡ್ಡಕುಸಿತವಾದ ವೇಳೆ ತಾವು ಸಹ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಂದಿದ್ದೀರಿ.ಅಲ್ಲಿನ ಸ್ಥಿತಿಯ ಬಗ್ಗೆ ತಾವು ಸಹ ಕಣ್ಣಾರೆ ಕಂಡಿದ್ದು, ಇದೀಗ ಕಡಲ ಅಲೆಯಿಂದಾಗಿ ಮನೆ ಕೊಚ್ಚಿಹೋಗಿದೆ. ಇನ್ನೂ ಅನೇಕ ಮನೆಗಳಿಗೆ ಅಪಾಯ ಇದೆ. ಹೀಗಾಗಿ ತಕ್ಷಣ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಶಾಸಕ ಸತೀಶ್ ಸೈಲ್ ಸಿ ಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ.
ಇದಕ್ಕೆ ಸಮತ ನೀಡಿದ ಸಿ ಎಂ ಅವರು ಆದಷ್ಟು ಶೀಘ್ರದಲ್ಲೇ ಸಮಸ್ಯೆ ಶಾಶ್ವತ ಪರಿಹಾರ ನೀಡಲಾಗುವುದು ಜೊತೆಗೆ ಸಮುದ್ರದ ಅಲೆಯಿಂದಾಗಿ ಕೊಚ್ಚಿಹೋಗಿರುವ ಕುಟುಂಬ ಏನಿದೆ ಅವರಿಗೂ ಸಹ ಸರಕಾರದಿಂದ ಪರಿಹಾರ ನೀಡಲಾಗುವುದು ಎಂದು ಸಿ ಎಂ ಅವರು ಸೈಲ್ ಅವರಿಗೆ ಭರವಸೆ ನೀಡಿದ್ದಾರೆ.
ಸ್ಥಳೀಯರಿಂದ ಶಾಸಕರ ಕಾರ್ಯಕ್ಕೆ ಮೆಚ್ಚುಗೆ
ಹಾರವಾಡದಲ್ಲಿ ಕಡಲ ಅಲೆಯಿಂದಾಗಿ ಮನೆ ಕೊಚ್ಚಿಹೋಗಿದೆ. ಈ ಬಗ್ಗೆ ನಮ್ಮ ಶಾಸಕರಾಗಿರುವ ಸತೀಶ್ ಸೈಲ್ ಅವರು ತಕ್ಷಣ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ನಮ್ಮ ಸಮಸ್ಯೆಯನ್ನ ಸಿ ಎಂ ಗಮನಸೆಳೆದಿದ್ದಾರೆ. ಶಾಸಕ ಕಾರ್ಯಕ್ಕೆ ಮೆಚ್ಚಬೇಕಾಗಿದೆ. ಅವರು ಶಿರೂರು ಗುಡ್ಡಕುಸಿತ ಆದ ವೇಳೆ ಸಹ ಶಾಸಕರು ಎನ್ನುವುದನ್ನ ಮರೆದು ಸಾಮಾನ್ಯ ವ್ಯಕ್ತಿಯಂತೆ ಕಾರ್ಯಚರಣೆಯಲ್ಲಿ ತೊಡಗಿಕೊಂಡಿರುವುದನ್ನ ನಾವೇಲ್ಲಾ ಕಣ್ಣಾರೆ ಕಂಡಿದ್ದೇವೆ. ಹಾಗೆ ಹಾರವಾರದಲ್ಲಿ ಏನು ಕಡಲಕೊರೆತದಿಂದ ಹಾನಿ ಉಂಟಾಗುತ್ತಿದೆ ಅದಕ್ಕೂ ಸಹ ಆದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸುತ್ತಾರೆ ಎನ್ನುವ ಬಗ್ಗೆ ಹಾರವಾಡ ಗ್ರಾಮಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.