ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ತಾಲೂಕಿನ ಗ್ರಾಮಾಂತರ ಪ್ರದೇಶವಾದ ಸಾಲಕಣಿ ಕೆಳಾಸೆಯ ನಿವಾಸಿ ರಾಮಚಂದ್ರ ರಾಮೇ ಗೌಡ ಅವರು ಇತ್ತೀಚೆಗೆ ಕೃಷಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಅಡಕೆ ಮರದಿಂದ ಬಿದ್ದು ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿ, ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ ಧನಸಹಾಯ ನೀಡಿದರು.
ಅಡಕೆ ಕೊನೆ ಕೊಯ್ಯುವ ಸಂದರ್ಭ ಮರ ಅರ್ಧಕ್ಕೆ ಮುರಿದು ಬಿದ್ದ ಪರಿಣಾಮ ರಾಮಚಂದ್ರ ಗೌಡ ಅವರು ಮರದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ಕುಟುಂಬದ ಆಧಾರಸ್ತಂಭವಾಗಿದ್ದ ಯಜಮಾನ ಈ ರೀತಿ ದುರ್ಘಟನೆಗೆ ಬಲಿಯಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದರು.
ಮೃತರ ಕುಟುಂಬದ ನೋವಿಗೆ ಸ್ಪಂದಿಸಿ, “ಸಂಕಷ್ಠದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ನಾವೆಲ್ಲರೂ ನಿಮ್ಮ ಕುಟುಂಬದ ಜೊತೆಗೆ ಸದಾ ನಿಲ್ಲುತ್ತೇವೆ” ಎಂದು ಭರವಸೆ ನೀಡಿ, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಸತೀಶ ಹೆಗಡೆ ಮುರೇಗಾರ್, ಕೃಷ್ಣಮೂರ್ತಿ ಮುರೇಗಾರ್, ನಾಗರಾಜ ಹೆಗಡೆ ಕಡಕಿನಬೈಲು, ವೆಂಕಟರಮಣ ಕೆಳಾಸೆ, ವಿನಾಯಕ ಪೂಜಾರಿ ಹಾಗೂ ಈಶ್ವರ ಗೌಡ ಕೆಳಾಸೆ ಉಪಸ್ಥಿತರಿದ್ದರು.
ಇದನ್ನೂ ಓದಿ/ಕಾಡುಪ್ರಾಣಿಯ ಮಾಂಸ ಸಾಗಾಟ: ದ್ವಿಚಕ್ರ ವಾಹನ ಸಹಿತ ಆರೋಪಿಯ ಬಂಧನ




