ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಲೇಶಿಯಾದ ಕೋಲಾಲಂಪುರದಲ್ಲಿ ನಡೆದ ಇಂಡೋ-ಮಲೇಶಿಯನ್ ಯೋಗಾ ಚಾಂಪಿಯನ್ಶಿಪ್-2026 ರಲ್ಲಿ ಕೊಡ್ಕಣಿಯ ಮಾನ್ವಿ ಕುಮಾರ ನಾಯ್ಕ ಇವಳು ಪ್ರತ್ಯೇಕ ಎರಡು ಟ್ರೆಡಿಷನಲ್ ಹಾಗು ಆರ್ಟಿಸ್ಟಿಕ್ ಸೋಲೋ ವಿಭಾಗಗಳಲ್ಲಿ ಸ್ಪರ್ದಿಸಿ ಎಡರಲ್ಲೂ ಪ್ರಥಮ ಸ್ಥಾನ ಗಳಿಸಿ ಎರಡು ಚಿನ್ನದ ಪದಕ ಪಡೆಯುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ.
ವರ್ಲ್ಡ್ ಯೋಗಾ ಎಂಡ್ ಸ್ಪೋರ್ಟ್ಸ್ ಎಜ್ಯುಕೇಶನ್ ಕೌನ್ಸಿಲ್ರವರು ಈ ಚಾಂಪಿಯನ್ಶಿಪ್ನ್ನು ನಡೆಸಿದ್ದು, ಮಾನ್ವಿ ಕುಮಾರ ನಾಯ್ಕ 8 ರಿಂದ 10ನೇ ವಯಸ್ಸಿನ ಗ್ರೂಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಳು. ಮಾನ್ವಿ ಮೂಲತಃ ಕುಮಟಾ ತಾಲೂಕಿನ ಕೊಡ್ಕಣಿ ಗ್ರಾಮದ ಕುಮಾರ ರಾಮ ನಾಯ್ಕ ಹಾಗೂ ಸುವರ್ಣ ಮಂಜಪ್ಪ ನಾಯ್ಕ ದಂಪತಿಯ ಪುತ್ರಿ. ಸದ್ಯ ಹೊನ್ನಾವರದ ಮಾರ್ಥೋಮಾ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ.
ಹೆಚ್ಚಿನ ಯೋಗಾಭ್ಯಾಸ ತರಬೇತಿಯನ್ನು ತರಬೇತಿಯನ್ನು ಚೈತನ್ಯ ಯೋಗ ವಿಕಸನ ಕೇಂದ್ರ ಹೊನ್ನಾವರದಲ್ಲಿ ಯೋಗ ಗುರುಗಳಾದ ರಾಜೇಶ್ವರಿ ಹೆಗಡೆ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಇದನ್ನೂ ಓದಿ/ಸರ್ಕಾರಿ ಕಚೇರಿಯಲ್ಲೇ ರಾಸಲೀಲೆ ಆರೋಪ: ಡಿಜಿಪಿ ರಾಮಚಂದ್ರ ರಾವ್ ಅಮಾನತು


