
ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ಸೀಬರ್ಡ್ ಬಸ್ ದುರಂತದಲ್ಲಿ ಮೃತಪಟ್ಟ ಭಟ್ಕಳ ತಾಲ್ಲೂಕಿನ ಶಿರಾಳಿ ನಿವಾಸಿ ರಶ್ಮಿ ಮಹಲೆ ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಪುತ್ರಿಯ ಮಾಹಿತಿ ಸಿಗದೆ ಚಿತ್ರದುರ್ಗಕ್ಕೆ ತೆರಳಿದ್ದ ರಶ್ಮಿಯ ತಂದೆ ರತ್ನಾಕರ್ ಮಹಲೆ ಅವರು, ಡಿ.ಎನ್.ಎ ಪರೀಕ್ಷೆಗಾಗಿ ರಕ್ತ ಮಾದರಿ ನೀಡಿದ ಬಳಿಕ ಇಂದು ಬರಿಗೈಯಲ್ಲೇ ಶಿರಾಲಿಗೆ ವಾಪಸ್ ಆಗಿದ್ದಾರೆ.ಸೀಬರ್ಡ್ ಬಸ್ ದುರಂತದಲ್ಲಿ ರಶ್ಮಿ ಮೃತಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಮೃತದೇಹ ಗುರುತಿಸಲು ಅಗತ್ಯವಿದ್ದ ಡಿ.ಎನ್.ಎ ಪರೀಕ್ಷೆಗೆ ರತ್ನಾಕರ್ ಮಹಲೆ ರಕ್ತ ಮಾದರಿ ನೀಡಿದ್ದಾರೆ. ಪುತ್ರಿಯ ಅಕಾಲಿಕ ಸಾವಿನಿಂದ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದು, ಮನೆಮಂದಿ ದುಃಖದಲ್ಲಿ ಮುಳುಗಿದ್ದಾರೆ.
ಈ ದುರ್ಘಟನೆ ಕುರಿತು ಮಾಹಿತಿ ಪಡೆದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮೃತ ರಶ್ಮಿ ಅವರ ನಿವಾಸಕ್ಕೆ ಭೇಟಿ ನೀಡಿ, ತಂದೆ ರತ್ನಾಕರ್ ಮಹಲೆ, ತಾಯಿ ಸವಿತಾ ಹಾಗೂ ಸಹೋದರರಿಗೆ ಸಾಂತ್ವನ ಹೇಳಿದರು. ರಶ್ಮಿ ಅವರ ಮೃತದೇಹವನ್ನು ಆದಷ್ಟು ಬೇಗ ಕುಟುಂಬಕ್ಕೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಕಾಗೇರಿ ಅವರೊಂದಿಗೆ ಮಾಜಿ ಶಾಸಕ ಸುನಿಲ್ ನಾಯ್ಕ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಉಪಸ್ಥಿತರಿದ್ದು,


