♈ ಮೇಷ (Aries)
ಇಂದು ಉತ್ಸಾಹ ಹೆಚ್ಚಾಗಿರುತ್ತದೆ. ಕೆಲಸಕ್ಕೆ ಹೊಸ ದಿಕ್ಕು ಸಿಗುವ ಶುಭ ದಿನ. ಹಿರಿಯರಿಂದ ಮೆಚ್ಚುಗೆ, ಸಹೋದ್ಯೋಗಿಗಳಿಂದ ಸಹಕಾರ ದೊರೆಯುವ ಸಾಧ್ಯತೆ. ಹಣಕಾಸಿನಲ್ಲಿ ಹೊಸ ಆದಾಯ ಮೂಲ ಕಂಡುಕೊಳ್ಳಬಹುದು. ಕುಟುಂಬದಲ್ಲಿ ಚಿಕ್ಕ ಗಲಾಟೆಗಳು ಇದ್ದರೂ ಸಂಜೆ ವೇಳೆಗೆ ಸೇಟಾಗುತ್ತದೆ. ವಾಹನ ಚಲಾಯಿಸುವಾಗ ಜಾಗ್ರತೆ.

♉ ವೃಷಭ (Taurus)
ಬಾಕಿ ಕೆಲಸಗಳನ್ನು ಮುಗಿಸಲು ಇದು ಉತ್ತಮ ದಿನ. ಮುಂದೆ ಹೋಗುವಂತೆ ತಡೆಯುತ್ತಿದ್ದ ಅಡೆತಡೆಗಳು ನಿವಾರಣೆಯಾಗುವ ಲಕ್ಷಣ. ಮನೆಯವರೊಂದಿಗೆ ಸಮಯ ಕಳೆಯಲು ಅವಕಾಶ. ಹಣಕಾಸಿನ ವಿಷಯದಲ್ಲಿ ಲೆಕ್ಕಾಚಾರ ಅಗತ್ಯ—ಅನಗತ್ಯ ಖರ್ಚು ಹೆಚ್ಚಾಗಬಹುದು. ಆರೋಗ್ಯದಲ್ಲಿ ಲಘು ಅಸ್ವಸ್ಥತೆ.

♊ ಮಿಥುನ (Gemini)
ನೀವು ಇಂದಿನ ದಿನ ಕುತೂಹಲದಿಂದ ಕೂಡಿರುವಿರಿ. ಹೊಸ ಪರಿಚಯಗಳು ಭವಿಷ್ಯದಲ್ಲಿ ಲಾಭಕರ. ಕೆಲಸದಲ್ಲಿ ಚಲನವಲನಗಳು ಹೆಚ್ಚಾಗಬಹುದು. ಯೋಜನೆಗಳನ್ನು ತಕ್ಷಣ ಜಾರಿಗೆ ತರದೆ ಸ್ವಲ್ಪ ಯೋಚನೆ ಮಾಡಿದರೆ ಲಾಭ. ಸ್ನೇಹಿತರೊಂದಿಗೆ ಉತ್ತಮ ಸಂಭಾಷಣೆ. ಪ್ರೇಮ ವಿಚಾರದಲ್ಲಿ ಆನಂದದ ಸುದ್ದಿ.

♋ ಕಟಕ (Cancer)
ಮನಸ್ಸು ಶಾಂತವಾಗಿದ್ದು ನಿರ್ಧಾರ ಸಾಮರ್ಥ್ಯ ಉತ್ತಮ. ಕುಟುಂಬ ಸಂಬಂಧ ಬಲವಾಗುವ ದಿನ. ಆಸ್ತಿ-ಮನೆ-ಜಮೀನು ಸಂಬಂಧಿತ ಕೆಲಸಗಳಲ್ಲಿ ಚಲನವಲನ. ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರುವುದು. ದೀರ್ಘಕಾಲದ ಯೋಜನೆಗೆ ಶುಭ ಆರಂಬ.

♌ ಸಿಂಹ (Leo)
ನಿಮ್ಮ ಮಾತು ಮತ್ತು ಸಲಹೆಗೆ ಬೆಲೆ ಸಿಗುವ ದಿನ. ಇಂದು ಹೆಚ್ಚು ಜನರಿಂದ ಸಂಪರ್ಕ ಬರಬಹುದು. ವ್ಯಾಪಾರಿಗಳಿಗೆ ಲಾಭದ ದಿನ. ಅಧಿಕಾರಸ್ಥರೊಂದಿಗೆ ಮಾತುಕತೆ ಫಲಕಾರಿ. ಮನೆಯ ವಾತಾವರಣ ಸುಂದರ. ಆನ್‌ಲೈನ್ ಕೆಲಸ ಅಥವಾ ತಂತ್ರಜ್ಞಾನ ಸಂಬಂಧಿತ ಕ್ಷೇತ್ರದಲ್ಲಿ ವಿಶೇಷ ಯಶಸ್ಸು.

♍ ಕನ್ಯಾ (Virgo)
ಕೆಲಸದ ಒತ್ತಡ ಸ್ವಲ್ಪ ಹೆಚ್ಚಾದರೂ ಫಲಿತಾಂಶ ಉತ್ತಮವಾಗುತ್ತದೆ. ಹಣ ಉಳಿಸಲು ಸೂಕ್ತ ಸಮಯ—ಎಚ್ಚರಿಕೆಯಿಂದ ನಡೆದುಕೊಂಡರೆ ಬರುವ ದಿನಗಳಲ್ಲಿ ಲಾಭ. ಹಳೆಯ ಆರೋಗ್ಯ ಸಮಸ್ಯೆ ಮತ್ತೆ ತಲೆದೋರುವ ಸಾಧ್ಯತೆ, ಜಾಗ್ರತೆ ಅಗತ್ಯ. ಸಂಬಂಧಗಳಲ್ಲಿ ಮೃದು ಮಾತು ಆಯುಧ.

♎ ತುಲಾ (Libra)
ಹೊಸ ಅವಕಾಶಗಳು ಎದುರಾಗುವ ದಿನ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಉತ್ತಮ ಸಮಯ. ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಕೆಲ ಕನಸುಗಳನ್ನು ನಿಜಗೊಳಿಸಲು ಅವಕಾಶ ಕಂಡುಕೊಳ್ಳಬಹುದು. ಕಾನೂನು ಅಥವಾ ಒಪ್ಪಂದ ಕೆಲಸಗಳಿಗೆ ಮಂಗಳಕರ ದಿನ.

♏ ವೃಶ್ಚಿಕ (Scorpio)
ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಮುನ್ನೋಟ ಅಗತ್ಯ. ಉದ್ಯೋಗದಲ್ಲಿ ಸ್ಥಿರತೆ, ಆದರೆ ಹೊಸ ಕೆಲಸದ ಒತ್ತಡ. ಹಣಕಾಸಿನಲ್ಲಿ ಸುಧಾರಣೆ ಇದ್ದರೂ ಹೂಡಿಕೆ ಜಾಗೃತೆಯಿಂದ ಮಾಡುವುದು ಒಳಿತು. ಹಳೆಯ ಸ್ನೇಹಿತರೊಂದಿಗೆ ಭೇಟಿ.

♐ ಧನು (Sagittarius)
ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ನಿಮ್ಮ ಮಾತುಗಳಿಗೆ ಇಂದು ಹೆಚ್ಚಿನ ಬೆಲೆ. ಹೊಸ ಕೆಲಸ ಆರಂಭಿಸಲು ಶುಭ ದಿನ. ಪ್ರಯಾಣ ಅವಕಾಶ—ಇದು ಕೆಲಸ ಅಥವಾ ಕುಟುಂಬ ಕಾರಣದಿಂದ ಆಗಬಹುದು. ಶುಭಸುದ್ದಿ ಕೇಳುವ ಸಾಧ್ಯತೆ.

♑ ಮಕರ (Capricorn)
ನಿಮ್ಮ ಶ್ರಮಕ್ಕೆ ಇಂದು ಬಹುಮಾನ. ಉದ್ಯೋಗದಲ್ಲಿ ಪದೋನ್ನತಿ ಅಥವಾ ಜವಾಬ್ದಾರಿಯಲ್ಲಿ ಏರಿಕೆ ಕಾಣಬಹುದು. ಹಣಕಾಸು ಬಲವಾಗುತ್ತದೆ. ಕುಟುಂಬದಲ್ಲಿ ಸೌಖ್ಯ. ಆರೋಗ್ಯದಲ್ಲಿ ಉತ್ತಮ ಶಕ್ತಿ. ಹೂಡಿಕೆಗೆ ಯೋಗ್ಯ ಸಮಯ.

♒ ಕುಂಭ (Aquarius)
ಕಳೆದ ಕೆಲವು ದಿನಗಳಿಂದ ಇದ್ದ ಗೊಂದಲ ನಿವಾರಣೆಯಾಗಬಹುದು. ಕೆಲಸದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ. ಹಣಕಾಸು ಸ್ಥಿರತೆ. ಮಾನಸಿಕ ಶಾಂತಿ. ಕಲಾತ್ಮಕ ಅಥವಾ ಸೃಜನಶೀಲ ಕೆಲಸಗಳಿಗೆ ಉತ್ತಮ ದಿನ.

♓ ಮೀನ (Pisces)
ಸೃಜನಶೀಲತೆ ಹೆಚ್ಚು. ಕಲೆ, ಸಂಗೀತ, ಬರವಣಿಗೆ ಕ್ಷೇತ್ರದಲ್ಲಿ ಉತ್ತಮ ಫಲ. ಹಣ ಬರುವಿಕೆ. ಹೊಸ ಪ್ರಾರಂಭಗಳ ಸೂಚನೆ. ಕುಟುಂಬದಿಂದ ಶುಭಸಮಾಚಾರ. ಆರೋಗ್ಯದಲ್ಲಿ ಸ್ವಲ್ಪ ವಿಶ್ರಾಂತಿ ಅಗತ್ಯ.

ಇಂದಿನ ಪಂಚಾಂಗ
ತಿಥಿ ಪಾಡ್ಯ24:55:14
ಪಕ್ಷ. ಕೃಷ್ಣ
ನಕ್ಷತ್ರ. ರೋಹಿಣಿ11:45:29
ಯೋಗ. ಸಿದ್ಧಿ08:07:20
ಯೋಗ. ಸಾಧ್ಯ27:48:03
ಕರಣ. ಬಾಲವ14:47:41
ಕರಣ. ಕೌಲವ24:55:14

ತಿಂಗಳು (ಅಮಾವಾಸ್ಯಾಂತ್ಯ)ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ). ಪುಷ್ಯ
ಚಂದ್ರ ರಾಶಿ ವೃಷಭtill 22:14:39
ಚಂದ್ರ ರಾಶಿ ಮಿಥುನfrom 22:14:39
ಸೂರ್ಯ ರಾಶಿ ವೃಶ್ಚಿಕ

ಸೂರ್ಯೋದಯ. 06:29:45
ಸೂರ್ಯಾಸ್ತ. 17:51:20
ಹಗಲಿನ ಅವಧಿ 11:21:35
ರಾತ್ರಿಯ ಅವಧಿ 12:38:57
ಚಂದ್ರೋದಯ. 18:15:41
ಚಂದ್ರಾಸ್ತ. 30:49:36

ರಾಹು ಕಾಲ. 10:45 – 12:11 ಅಶುಭ
ಯಮಘಂಡ ಕಾಲ. 15:01 – 16:26 ಅಶುಭ
ಗುಳಿಕ ಕಾಲ. 07:55 – 09:20
ಅಭಿಜಿತ್ 11:48 – 12:33 ಶುಭ
ದುರ್ಮುಹೂರ್ತ. 08:46 – 09:32 ಅಶುಭ
ದುರ್ಮುಹೂರ್ತ. 12:33 – 13:19 ಅಶುಭ

ಅದೃಷ್ಟ ಸಂಖ್ಯೆ : 6-8-5-3 : 22