ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಡಿಸೆಂಬರ್ 22 ರಿಂದ 28ರ ವರೆಗೆ ಏಳು ದಿನಗಳ ಕಾಲ ಕರಾವಳಿ ಉತ್ಸವ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ..

ಉತ್ಸವದ ಉದ್ಘಾಟನೆಯನ್ನು ಡಿಸೆಂಬರ್ 22ರಂದು ಮುಖ್ಯಮಂತ್ರಿಗಳು ನೆರವೇರಿಸಲಿದ್ದು,ಉಪ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಅದೇ ದಿನ ಜಿಲ್ಲಾಧಿಕಾರಿ ಕಚೇರಿ, ಕ್ರಿಮ್ಸ್ ಆಸ್ಪತ್ರೆ ಕಟ್ಟಡ, ಮಂಜುಗುಣಿ ಸೇತುವೆ ಸೇರಿದಂತೆ ಮತ್ತಿತರ ಯೋಜನೆಗಳ ಉದ್ಘಾಟನೆ ನಡೆಯಲಿದೆ.

ಉತ್ಸವದ ಅವಧಿಯಲ್ಲಿ ಪ್ರತಿ ದಿನ ಸಂಜೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ಪ್ರಮುಖ ಕಾರ್ಯಕ್ರಮಗಳ ಮೊದಲು ಸ್ಥಳೀಯ ಕಲಾವಿದರ ಪ್ರದರ್ಶನ ನಡೆಯಲಿವೆ.

ಬೆಳಗಿನ ಅವಧಿಯಲ್ಲಿ ರಂಗೋಲಿ ಸ್ಪರ್ಧೆ, ಮ್ಯಾರಥಾನ್, ಅಡುಗೆ ಸ್ಪರ್ಧೆ, ಶ್ವಾನ ಪ್ರದರ್ಶನ, ಗಾಳಿಪಟ ಹಬ್ಬ ಸೇರಿದಂತೆ ಅನೇಕ ಮನರಂಜನಾ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಎಲ್ಲ ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Karwar: District Commissioner K. Lakshmipriya has announced that the Karavali Utsav will be grandly organized for seven days from December 22 to 28 at the Rabindranath Tagore Beach in the city.

The festival will be inaugurated on December 22 by the Chief Minister. The Deputy Chief Minister, various State Cabinet Ministers, the District In-charge Minister, public representatives, and senior officials will participate in the event.

On the same day, several projects including the District Commissioner’s Office, KRIMS Hospital building, and Manjuguni Bridge will be inaugurated.

During the festival, cultural programs by state-level and national-level artists will be held every evening, while local artists will perform before the main events.

In the morning sessions, various entertainment and competitive events such as rangoli competitions, marathon, cooking competitions, dog show, and kite festival will be organized.
The complete schedule of all programs will be made available to the public soon, the DC said.

Karavali Utsav 2024 in Karwar, December 22–28 Festival Highlights, uttarakannad,Rabindranath Tagore Beach. Cultural shows, competitions, project inaugurations, and daily entertainment events throughout the seven-day festival.