ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಹೆದ್ದಾರಿ ದಾಟುತ್ತಿದ್ದ ವೃದ್ದ ಮಹಿಳೆ ಲಾರಿ ಡಿಕ್ಕಿ ಹೊಡೆದು ಮಹಿಳೆಯ ಎರಡು ಕಾಲಿಗೆ ಗಂಭೀರವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಘಟನೆಯಲ್ಲಿ‌ ಅವರ್ಸಾದ ಎಲ್ಲರ ಪ್ರೀಯ ಪ್ರೇಮಾ (ಅವರ್ಸಾ ಪ್ರೇಮಕ್ಕ) ಅಪಘಾತದಲ್ಲಿ ಎರಡು ಕಾಲು ಕಳೆದುಕೊಂಡಿದ್ದಾರೆ. ಈಕೆ ಒಂದು ಬದಿಯಿಂದ ಇನ್ನೊಂದು ಬಂದಿಗೆ ಹೆದ್ದಾರಿ ದಾಟುತ್ತಿದ್ದ ವೇಳೆಯಲ್ಲಿ  ಅತೀ ವೇಗವಾಗಿ ಬಂದ ಲಾರಿ ಮಹಿಳೆ ಮೇಲೆ‌ ಹಾದು ಹೋಗಿದೆ. ಇದರಿಂದ ಆಕೆಯ ಎರಡು ಕಾಲಿಗೆ ಗಂಭೀರವಾಗಿ ಯಾಗವಾಗಿದೆ. ತಕ್ಷಣ ಆಕೆಯನ್ನ  ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ ಲಾರಿ ಚಾಲಕನಿಗೆ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ/ಅಂಕೋಲಾ ಪುರಸಭೆಯಲ್ಲಿ ಕರ್ತವ್ಯ ಲೋಪ – ಅಧಿಕಾರ ದುರುಪಯೋಗದ ಲೋಕಾಯುಕ್ತಕ್ಕೆ ದೂರು : ಮಂಜುನಾಥ ನಾಯ್ಕ