ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ:  ತಾಲ್ಲೂಕಿನ ಮುರ್ಕಿಕೊಡ್ಡುನಲ್ಲಿ ನಿನ್ನೆ ಸಂಭವಿಸಿದ ಸಿಲೆಂಡರ್ ಸ್ಪೋಟದಲ್ಲಿ ಮೃತರಾದ ಪದವಿ ವಿದ್ಯಾರ್ಥಿನಿ ರಂಜನಾ ನಾಗಪ್ಪ ದೇವಾಡಿಗ್ ಅವರ ಮನೆಗೆ ಶಾಸಕರಾದ ಭೀಮಣ್ಣ ಟಿ. ನಾಯ್ಕ್ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನಾ ಹೇಳಿದರು.

ಈ ವೇಳೆ ಶಾಸಕರು, ಸರಕಾರದಿಂದ ನೀಡಬಹುದಾದ ಪರಿಹಾರವನ್ನು ತಕ್ಷಣವೇ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಘಟನೆ ಸ್ಥಳಕ್ಕೆ ತಹಶಿಲ್ದಾರ ಪಟ್ಟರಾಜ ಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ್ರು, ಪಿಎಸ್ಆಯ್ ಅಶೋಕ ರಾಠೋಡ ಸೇರಿದಂತೆ ಇತರ ಅಧಿಕಾರಿಗಳು ಸಹ ಹಾಜರಿದ್ದರು.

ಸ್ಥಳೀಯ ನಿವಾಸಿಗಳು ಘಟನೆಗೆ ಸಂಬಂಧಿಸಿದಂತೆ ಗಂಭೀರವಾಗಿ ನೋವು ವ್ಯಕ್ತಪಡಿಸಿದ್ದಾರೆ ಮತ್ತು ಅಧಿಕಾರಿಗಳ ತ್ವರಿತ ಕ್ರಮಕ್ಕೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ : ದೈಹಿಕ ಶಿಕ್ಷಕನೋರ್ವನ ಮೊಬೈನಲ್ಲಿ 2ಸಾವಿರಕ್ಕೂ ಹೆಚ್ಚು ಅಶ್ಲೀಲ ವಿಡಿಯೋ