ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಚಿತ್ತಾಕೂಲ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಾಹಾಂತೇಶ್ ವಾಲ್ಮೀಕಿ ಅವರನ್ನ ಮುಂಡಗೋಡ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಮುಂಡಗೋಡದಲ್ಲಿ ಕ ಪಿಎಸ್ಐ ಆಗಿದ್ದ ಪರಶುರಾಮ್ ಮಿರ್ಜಿಗಿ ಅವರನ್ನ ಚಿತ್ತಾಕೂಲ ಠಾಣೆಗೆ ವರ್ಗಾವಣೆ ಮಾಡಲಾಗಿದೆ..

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಒಂದು ವರ್ಷ ಎಂಟು ತಿಂಗಳು ಪಿಎಸ್ಐ (PSI) ಆಗಿ ಸೇವೆ ಸಲ್ಲಿಸುತ್ತಿದ್ದ ಪರಶುರಾಮ್ ಮಿರ್ಜಿಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರು ನಾಳೆ (ಮಂಗಳವಾರ) ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಪರಶುರಾಮ್ ಮಿರ್ಜಿಗಿ ಅವರು ಮುಂಡಗೋಡದಲ್ಲಿ ಸೇವೆ ಸಲ್ಲಿಸುವ ಅವಧಿಯಲ್ಲಿ ಜನರೊಂದಿಗೆ ಬೆರೆತು, ಸದಾ ಸ್ನೇಹಪರವಾಗಿ ಕಾರ್ಯನಿರ್ವಹಿಸಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಸೇವಾ ಮನೋಭಾವ ಹಾಗೂ ಜನಪರ ಕಾರ್ಯವೈಖರಿಯಿಂದ ಠಾಣೆಯ ಕಾರ್ಯವೈಖರಿಗೂ ಒಳ್ಳೆಯ ಹೆಸರು ತಂದಿದ್ದಾರೆ.

ಮುಂಡಗೋಡ ಪೊಲೀಸ್ ಠಾಣೆಯ ನೂತನ ಪಿಎಸ್ಐ ಆಗಿ ಚಿತ್ತಾಕುಲದಿಂದ ವರ್ಗಾವಣೆಯಾಗಿರುವ  ಮಾಹಾಂತೇಶ್ ವಾಲ್ಮೀಕಿ ಅವರು ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ : ದಸರಾ ಉದ್ಘಾಟನೆ ವಿವಾದಕ್ಕೆ ಫುಲ್‌ಸ್ಟಾಪ್ : ಬಾನು ಮುಷ್ತಾಕ್ ಆಯ್ಕೆಗೆ ಹೈಕೋರ್ಟ್ ಹಸಿರು ನಿಶಾನೆ