ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ : ಅಹ್ಮದಾಬಾದ್ನಿಂದ ಲಂಡನ್ಗೆ ಜೂ.12ರಂದು ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ-171 ತಾಂತ್ರಿಕ ಕಾರಣಗಳಿಂದ ಕ್ರಾಶ್ ಲ್ಯಾಂಡ್ ಆಗಿತ್ತು. ಈ ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಎಲ್ಲರಿಗೂ ಇದೀಗ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಪುಣ್ಯಾಶ್ರಮದಲ್ಲಿ ಋತ್ವಿಜರ ನೇತೃತ್ವದಲ್ಲಿ ಪಿಂಡ ಪ್ರದಾನ ಮಾಡಿ, ಮೋಕ್ಷಕ್ಕೆ ಪ್ರಾರ್ಥನೆ ಸಲ್ಲಿಸಲಾಗಿದೆ.
ಕಳೆದ ಜೂ.12ರಂದು ಭಾರತದ ಅಹ್ಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ-171 ಕೆಲವು ತಾಂತ್ರಿಕ ಕಾರಣಗಳಿಂದ ಕ್ರಾಶ್ ಲ್ಯಾಂಡ್ ಆಗಿತ್ತು. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು, ಸ್ಥಳೀಯ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿ ಒಟ್ಟು 260 ಜನರು ಮೃತಪಟ್ಟಿದ್ದರೆ 68 ಜನರು ಗಂಭೀರ ಗಾಯಗೊಂಡಿದ್ದರು. ಈ ಘಟನೆ ನಡೆದು ಈಗಾಗಲೇ ಎರಡು ತಿಂಗಳು ಕಳೆದಿದರು ಮೃತರ ಆತ್ಮಗಳಿಗೆ ಮೋಕ್ಷ ದೊರೆಯಬೇಕೆಂಬ ಪ್ರಾರ್ಥನೆಯೊಂದಿಗೆ ಗೋಕರ್ಣದ ನಾಗಬೀದಿಯಲ್ಲಿರುವ ಪುಣ್ಯಾಶ್ರಮದಲ್ಲಿ ಶ್ರೀ ಮಹಾಬಲೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ರಾಜ ಗೋಪಾಲ ಅಡಿ ನೇತೃತ್ವದಲ್ಲಿ ಪಿತೃ ಕಾರ್ಯ ನೆರವೇರಿಸಲಾಗಿದೆ. ಪ್ರಸ್ತುತ ಪಿತೃಪಕ್ಷದ ಪರ್ವಕಾಲದ ಹಿನ್ನೆಲೆ ಮೃತರಿಗೆ ಪಿಂಡ ಪ್ರಧಾನ, ಹೋಮ ಸೇರಿದಂತೆ ವಿವಿಧ ಕರ್ಮಕಾರ್ಯಗಳನ್ನು ನಡೆಸಿದಲ್ಲಿ ಮೋಕ್ಷ ದೊರೆಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ. ಈ ಹಿನ್ನೆಲೆ ವಿಮಾನ ದುರಂತದಲ್ಲಿ ಮಡಿದ ಮೃತ ಮಾಜಿ ಮುಖ್ಯಮಂತ್ರಿ ಸೇರಿ 260ಕ್ಕೂ ಹೆಚ್ಚು ಜನರ ಹೆಸರು ಹೇಳಿ ಜಾತಿ, ಧರ್ಮ ಮೀರುವ ಮೂಲಕ ಪ್ರಿಂಡ ಪ್ರದಾನ ಮಾಡಿ ಮೋಕ್ಷಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಗೋಕರ್ಣ ಕ್ಷೇತ್ರದ ಕೋಟಿತೀರ್ಥದ ಬಳಿಯಿರುವ ನಾಗಬೀದಿಯಲ್ಲಿರುವ ಪುಣ್ಯಾಶ್ರಮದಲ್ಲಿ ಕರ್ಮಕಾರ್ಯಗಳನ್ನು ನೆರವೇರಿಸಿದರೆ, ಎರಡನೇ ದಿನ ಕೋಟಿತೀರ್ಥದಲ್ಲಿ ಪಿಂಡ ಪ್ರಧಾನ ನಡೆಸಲಾಗಿದೆ. ಕೋಟಿತೀರ್ಥದಲ್ಲಿ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ಮಾಡಿದರೆ ಮೋಕ್ಷ ದೊರೆಯುತ್ತದೆ ಎಂಬ ಪ್ರತೀತಿ ಇರುವುದರಿಂಸ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಕೋಟಿತೀರ್ಥದಲ್ಲಿ ಪಿಂಡಪ್ರದಾನ ನಡೆಸಲಾಗಿದೆ. ಎರಡು ದಿನಗಳ ಕಾಲ ನಡೆದ ಈ ಕರ್ಮಕಾರ್ಯದಲ್ಲಿ ಪಾರಾಯಣ, ರುದ್ರ ಹೋಮ, ನಾರಾಯಣ ಬಲಿ, ತಿಲ ಹೋಮ, ಪ್ರಾಯಶ್ಚಿತ ಹೋಮ, ಪಿಂಡಿ ಶ್ರಾದ್ಧ, ದಶದಾನ, ಬ್ರಾಹ್ಮಣ ಭೋಜನ ಮಾತ್ರವಲ್ಲದೇ, ಮೃತರ ಹೆಸರಿನಲ್ಲಿ ಗೋದಾನ, ವಸ್ತ್ರದಾನ ಮಾಡುವ ಮೂಲಕ ಸುಮಾರು 30ಕ್ಕೂ ಹೆಚ್ಚು ಋತ್ವಿಜರು ಪಿತೃ ಕಾರ್ಯ ನೆರವೇರಿಸಿದ್ದಾರೆ. ಈ ಕಾರ್ಯದಲ್ಲಿ ಋತ್ವಿಜರು ಹಾಗೂ ಸಾರ್ವಜನಿಕರು ಸೇರಿ ಸುಮಾರು 100 ಜನರು ಭಾಗವಹಿಸಿದ್ದರು
ವಿಮಾನ ದುರಂತದಲ್ಲಿ ಭೀಕರವಾಗಿ ಸಾವನ್ನಪ್ಪಿದ ವಿವಿಧ ಜಾತಿ, ಧರ್ಮದ ಜನರಿಗೆ ಪಿಂಡ ಪ್ರದಾನ ಮಾಡಿ ಮೋಕ್ಷಕ್ಕಾಗಿ ಪ್ರಾರ್ಥಿಸಿದಲ್ಲದ್ದೇ, ಮುಂದೆ ಇಂತಹ ದುರ್ಘಟನೆಗಳು ದೇಶದಲ್ಲಿ ನಡೆಯಬಾರದು ಎಂಬ ಪ್ರಾರ್ಥನೆಯನ್ನೂ ಗೋಕರ್ಣದ ಋತ್ವಿಜರು ದೇವರ ಮುಂದಿಟ್ಟದ್ದು ಮಾದರಿಯಾಗಿದೆ.
ಇದನ್ನೂ ಓದಿ : ಘನಘೋರ ಅಪಘಾತ: ಲಾರಿ ಹರಿದು 9ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ