ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ :ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ದನಗಳ ಮಾರಣಹೋಮ ಸೈಲೆಂಟಾಗಿ ನಡೆಯುತ್ತಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಭಟ್ಕಳದ ಮುಗ್ದಂ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ನೂರಾರು ದನಗಳ ಮೂಳೆಗಳು ಪತ್ತೆಯಾಗಿದ್ದು, ಈ ಪ್ರದೇಶ ದನಗಳ ಹತ್ಯೆಯ ಸಾಕ್ಷಿಯಾಗಿರುವುದು ಸ್ಥಳೀಯರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರು ಹಾಗೂ ಹಿಂದೂ ಮುಖಂಡರ ಮಾಹಿತಿ ಪ್ರಕಾರ, ಕಳೆದ ಎರಡು ಮೂರು ದಿನಗಳಲ್ಲೇ ದನಗಳನ್ನು ಹತ್ಯೆ ಮಾಡಿ, ಅವುಗಳ ರಕ್ತದ ಕಲೆಗಳು, ಮೂಳೆಗಳನ್ನು ಗುಡ್ಡದ ಮೇಲೆಯೇ ಎಸೆದು ಹಾಕಿರುವ ಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ಹಿಂದೆ ಪೊಲೀಸರು ನಾಕಾಬಂದಿ ನಡೆಸಿ ದನಗಳ್ಳರನ್ನು ಬಂಧಿಸಿದರೂ, ದನಗಳ ಪೂರೈಕೆ ಅಡ್ಡಿಯಿಲ್ಲದೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಘಟನೆಯ ಮಾಹಿತಿಯನ್ನು ತಿಳಿದು ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಸ್ಥಳಕ್ಕೆ ತೆರಳಿದಾಗ, ಪುರಸಭೆ ಸಿಬ್ಬಂದಿ ಮೂಳೆಗಳನ್ನು ವೇಸ್ಟೇಜ್ ಟ್ಯಾಂಕ್‌ಗೆ ಹಾಕಿ ತೆರವುಗೊಳಿಸಿರುವುದು ಗಮನಕ್ಕೆ ಬಂದಿದೆ. ಆದರೆ ಭಾರೀ ಪ್ರಮಾಣದ ಮೂಳೆಗಳು ಪತ್ತೆಯಾಗಿರುವುದರಿಂದ ಈ ಕಾರ್ಯಾಚರಣೆಯ ಹಿಂದೆ ದೊಡ್ಡ ಮಟ್ಟದ ಗೋಹತ್ಯೆ ಮಾಫಿಯಾ ಇರುವ ಸಾಧ್ಯತೆಯ ಶಂಕೆ ವ್ಯಕ್ತವಾಗಿದೆ.
ಭಟ್ಕಳದಲ್ಲಿ ನಡೆಯುತ್ತಿರುವ ಈ ಸೈಲೆಂಟ್ ದನಗಳ ಮಾರಣಹೋಮ ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿದೆ.. ಈ ಘಟನೆ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಗೋಹತ್ಯೆ ಪ್ರಕರಣದ ಹಿಂದೆ ಯಾರ ಬೆಂಬಲವಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
Mass Cow Slaughter Uncovered in Bhatkal, Piles of Bones Found
Bhatkal (Uttara Kannada):
A shocking case of silent mass cow slaughter has come to light in Bhatkal, Uttara Kannada district. Hundreds of cow bones have been discovered in the forest area near Mugdam Colony, sparking outrage among locals and Hindu organizations.
According to local residents and Hindu leaders, in just the past two to three days, several cows were brutally slaughtered. Traces of blood and piles of bones dumped openly in the area were clearly visible, indicating the scale of the incident.
Despite previous police crackdowns and arrests of cattle smugglers, allegations have surfaced that the illegal supply of cattle for slaughter continues without interruption.
When local residents and Hindu activists visited the site, they found municipal workers removing the bones and dumping them into a waste tank. The sheer quantity of bones discovered has fueled suspicions of a large-scale cow slaughter mafia operating behind the scenes.
Hindu organizations have strongly demanded immediate action to halt this silent massacre of cattle in Bhatkal. The incident has triggered widespread debate across the district, with many questioning who is backing the illegal cow slaughter network.
ಇದನ್ನೂ ಓದಿ: ED ಬಂಧನಕ್ಕೆ ಒಳಗಾದ ಶಾಸಕ ಸತೀಶ್ ಸೈಲ್ ಸೆಪ್ಟೆಂಬರ್ 12ರವರೆಗೆ ಕಸ್ಟಡಿ