ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು : ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಬುರುಡೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬುರುಡೆ ಪ್ರಕರಣದಲ್ಲಿ ಸೌಜನ್ಯ ಮಾವನ ಲಿಂಕ್ ಇರುವುದು SIT ತನಿಖೆಯಿಂದ‌ ಗೊತ್ತಾಗಿದೆ ಎನ್ನಲಾಗಿದೆ.

ಸೌಜನ್ಯ ಮಾವ ವಿಠಲ್ ಗೌಡ ಹಾಗೂ ಚಿನ್ನಯ್ಯ ಅವರೇ ಸೇರಿಕೊಂಡು ಈ ಬುರುಡೆಯನ್ನ ಬಂಗ್ಲೆಗುಡ್ಡೆಯಿಂದ ಪತ್ತೆಹಚ್ಚಿ ತಂದಿದ್ದರು ಎನ್ನಲಾಗಿದೆ..ಈ ಹಿಂದೆ ವಿಠಲ್ ಗೌಡ ನೇತ್ರಾವತಿ ತೀರದ ಸಮೀಪ ಹೊಟೇಲ್ ಇಟ್ಟುಕೊಂಡಿದ್ದ, ಆ ಸಂದರ್ಭದಲ್ಲೇ ಈ ಚಿನ್ನಯ್ಯ ಹಾಗೂ ವಿಠಲ್ ಗೌಡನ ನಡುವೆ ಉತ್ತಮ ಸ್ನೇಹ ಇತ್ತು ಎನ್ನಲಾಗಿದೆ. ಬಳಿಕ ಚಿನ್ನಯ್ಯ ಧರ್ಮಸ್ಥಳವನ್ನ ಬಿಟ್ಟು ಹೋದರು ಕೂಡ ವಿಠಲ್ ಗೌಡನ ಜೊತೆ ಸಂಪರ್ಕದಲ್ಲೇ ಇದ್ದ ಎನ್ನಲಾಗಿದೆ..ಈ ಇಬ್ಬರೂ ಸೇರಿ ಬಂಗ್ಲೆಗುಡ್ಡದಲ್ಲಿದ್ದ ಬುರುಡೆಯನ್ನ ಗಿರೀಶ ಮಟ್ಟಣ್ಣ ಟೀಂಗೆ ತಂದು ಕೊಟ್ಟಿದ್ದರಾ ಎನ್ನುವ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ..ಈ ಪ್ರಕರಣ ದಿನಕೊಂದು ತಿರುವು ಪಡೆಯುತ್ತಿದ್ದೆ.

ಘಟನೆ ಸಂಬಂಧ ಈ ಬುರುಡೆ ವಿಡಿಯೋವನ್ನ ಯೂಟ್ಯೂಬನಲ್ಲಿ ಅಪ್ ಲೋಡ್ ಮಾಡಿರುವ ಕೇರಳದ ಮುನಾಫ್ ಎಂಬಾತನಿಗೂ ತನಿಖೆಗೆ ಹಾಜರಾಗುವಂತೆ ಈಗಾಗಲೇ ಎಸ್ಐಟಿ ನೋಟಿಸ್ ಮಾಡಿದ್ದು, ನಾಳೆ ಸೋಮವಾರ ವಿಚಾರಣೆಗೆ ಹಾಕರಾಗೋದಾಗಿ ಮುನಾಫ್ ತಿಳಿಸಿದ್ದಾರೆ. ಒಂದು ಕಡೆ ಸೌಜನ್ಯ ಸಾವಿನ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಸೌಜನ್ಯ ಕುಟುಂಬ ಒತ್ತಾಯಿಸುತ್ತಿರುವಾಗಲೇ ಇದೀಗ ವಿಠಲ್ ಗೌಡ ತಂದಿದ್ದಾನೆ ಎನ್ನಲಾದ ಬುರುಡೆ ಪ್ರಕರಣ ಯಾವ ತಿರುವು ಪಡೆಯಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

Big Twist in Dharmasthala Skull Case
Mangaluru: A major twist has emerged in the ongoing Dharmasthala skull case, with SIT investigations revealing a possible link to Sowjanya’s uncle, Vithal Gowda.

According to sources, Vithal Gowda, along with an associate named Chinnayya, allegedly found the skull at Bangle Gudde and later handed it over to Girish Mattanna’s team. It is reported that Vithal Gowda previously owned a hotel near the banks of the Nethravathi River, during which time he developed a close friendship with Chinnayya. Even after Chinnayya left Dharmasthala, the two reportedly remained in contact.

Investigators are now looking into whether this duo worked together to recover the skull and hand it over to the group led by Girish Mattanna. The case appears to be taking new turns by the day.

Meanwhile, the SIT has issued a notice to a man named Munaf from Kerala, who allegedly uploaded a video of the skull to YouTube. Munaf has confirmed that he will appear for questioning tomorrow, Monday.

At the same time, Sowjanya’s family continues to demand a re-investigation into her death. With these new developments surrounding the skull allegedly brought in by Vithal Gowda, all eyes are now on the direction this case will take next.

ಇದನ್ನ ಓದಿ : ಹೊಸ ಹೋಂಡಾ ಸಿಟಿ 2025 ಬಿಡುಗಡೆ :ಅದ್ಭುತ ಮೈಲೇಜ್, 1498cc ಶಕ್ತಿಶಾಲಿ ಎಂಜಿನ್