ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ತಾಲೂಕಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಇಂದು ಅಂಕೋಲಾ ಪಟ್ಟಣದ ಅಜ್ಜಿಕಟ್ಟಾ ಶಾಲೆ ಬಳಿ ಇರುವ ಹೊಟೇಲ್ ಒಂದರ ಮೇಲೆ ದಾಳಿ ನಡೆಸಿದ ತಾಲೂಕಾ ಆರೋಗ್ಯಾಧಿಕಾರಿಗಳ ತಂಡ ಸ್ವಚ್ಛತೆ ಪರಿಶೀಲನೆ ನಡೆಸಲಾಗಿದ್ದು, ಹೊಟೇಲ್ನಲ್ಲಿ ಸ್ವಚ್ಚತೆ ಇಲ್ಲದಿರುವುದು ಹಾಗೂ ಕಲಬೆರೆಕೆ ಎಣ್ಣೆ ಉಪಯೋಗಿಸಿರುವುದು ಕಂಡುಬಂದಿದ್ದು, ತಕ್ಷಣ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಪರಿಶೀಲನೆ ವೇಳೆ ಹೊಟೇಲ್ಗಳಲ್ಲಿ ಅನೈರ್ಮಲ್ಯ ಹೃದಯ ಸಂಬಂಧಿ ಹಾಗೂ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿರುವ ರೀತಿಯಲ್ಲಿ ತಿಂಡಿ ತಿನಿಸುಗಳನ್ನು ತಯಾರಿಸುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಇಂತಹ ಹೊಟೇಲ್ಗಳ ಬಗ್ಗೆ ಮಾಹಿತಿ ಇದ್ದಲ್ಲಿ ತಮ್ಮಗೆ ತಿಳಿಸುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆನ್ನಲಾಗಿದೆ.,
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಜಗದೀಶ್ ಡಿ. ನಾಯ್ಕ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶೈಲಜಾ ಭಂಡಾರಿ, ಆರೋಗ್ಯ ನಿರೀಕ್ಷಣಾಧಿಕಾರಿ ಕು. ದರ್ಶನ ನಾಯ್ಕ, ತಾಲೂಕಾ ಎಪಿಡಮಾಲಜಿಸ್ಟ್ ಅಕ್ಷಯಕುಮಾರ್, ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರು ನಾಗರಾಜ ಕೆ. ನಾಯ್ಕ, ಟಿಬಿ ಸೂಪರ್ವೈಸರ್ ಸಂದೀಪ್ ಪಡ್ತಿ ದಾಳಿ ವೇಳೆ ಹಾಜರಿದ್ದರು.