ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಿನ್ನೆ ಬೆಳಿಗ್ಗೆಯಿಂದ ತುಸು ಬಿಡುವು ನೀಡಿದ್ದ. ಮಳೆ ರಾತ್ರಿಯಿಂದ ವ್ಯಾಪಕವಾಗಿ ಸುರಿಯುತ್ತಿದ್ದು, ಎಲ್ಲೇಡೆ ಪ್ರವಾಹದ ಭೀತಿ ಎದುರಾಗಿದೆ.ಸದ್ಯ ಅರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದನ್ನ ಗಮನಿಸಿದರೆ ರೆಡ್ ಅಲರ್ಟ್‌ಗೆ ತಿರುಗಿರುವಂತೆ ಕಾಣ್ತಾ ಇದೆ.. ಮಳೆ ಹಿನ್ನಲೆಯಲ್ಲಿ ಕಾರವಾರ, ಕುಮಟಾ,ಅಂಕೋಲಾ,ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಅಲ್ಲಿನ ಬಿಇಓ ಆದೇಶ ಹೊರಡಿಸಿದ್ದಾರೆ…
ರಜೆ ವಿಳಂಬ ಶಾಲೆಗೆ ಹೊರಟ ಬಸ್
ರಾತ್ರಿಯಿಂದಲ್ಲೂ ಧಾರಾಕಾರವಾರ ಮಳೆ ಸುರಿಯುತ್ತಿದ್ದರು, ರಜೆ ನೀಡಲು ವಿಳಂಬವಾದ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಕಡೆಯ ಖಾಸಗಿ ಶಾಲೆಗಳ ವಾಹನಗಳು ಈಗಾಗಲೇ ವಿದ್ಯಾರ್ಥಿಗಳನ್ನ ಕರೆದುಕೊಂಡು ಶಾಲೆ ಕಡೆ ಹೊರಟ್ಟಿದ್ದು, ಈ ಹಿನ್ನಲೆಯಲ್ಲಿ ಆಯಾ ಶಾಲೆಯನ್ನ ಅರ್ಧ ದಿನಕ್ಕೆ ಮಾತ್ರ ಸೀಮಿತ ಮಾಡಲಾಗಿದೆ.ಭಾರೀ ಮಳೆಯ ನಡುವೆಯೂ ವಿದ್ಯಾರ್ಥಿಗಳು ಹರಸಾಹಸ ಪಟ್ಟು ಮಳೆಯಲ್ಲಿ ನೆನೆಯುತ್ತಲೇ ಶಾಲೆಗೆ ಹೊರಡುವಂತಾಗಿದೆ..
ಜಿಲ್ಲೆಯ ಕರಾವಳಿ ಸೇರಿದಂತೆ ಬಹುತೇಕ ಭಾಗದಲ್ಲಿ ರಾತ್ರಿಯಿಂದ ಎಡಬಿಡದೆ ವರುಣ ಅಬ್ಬರಿಸುತ್ತಿದ್ದಾನೆ. ಭಾರಿ ಮಳೆಗೆ ವಾಹನ ಸವಾರರು ಕೂಡ ಸಂಚರಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಗ್ರಾಮೀಣ ಭಾಗದ ರಸ್ತೆಗಳಲ್ಲಂತು ಕೆರೆಯಂತಹ ಹೊಂಡಗಳು ಬಾಯ್ ತೆರೆದುಕೊಂಡಿದ್ದು, ಮಳೆಯ ಸಮಯದಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ಹೊಂಡ ಕಾಣದಂತಾಗಿದ್ದು, ಹಗಲು ಸಮಯದಲ್ಲಿಯೂ ಸಹ ಬ್ಯಾಟರಿ ಬೆಳಕಿನ ಮೂಲಕ ರಸ್ತೆಯ ಹುಡುಕಾಟ ಮಾಡಬೇಕಿದೆ. ಹೀಗಾಗಿ ಅದೆಷ್ಟೋ ವಾಹನ ಸವಾರರು ಹೊಂಡದಲ್ಲಿ ಬಿದ್ದು ಗಾಯಗೊಂಡ ಘಟನೆ ಕೂಡ ನಡೆದೆ.
ಇತಂಹ ರಸ್ತೆಯಲ್ಲೇ ನಿತ್ಯವೂ ಅನೇಕ ಶಾಲಾ ವಾಹನಗಳು ಸಂಚರಿಸುತ್ತಿದ್ದು, ನಿತ್ಯವೂ ಇತಂಹ ರಸ್ತೆಯಲ್ಲಿ ಸಂಚರಿಸುವ ಶಾಲಾ ವಾಹನ ಸವಾರರು ಕೂಡ ವಿದ್ಯಾರ್ಥಿಗಳನ್ನ ಎಚ್ಚರಿಕೆಯಿಂದ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.ಹೀಗಾಗಿ ಮಳೆಗಾಲದ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಎಲ್ಲಾ ಸಮಸ್ಯೆ ಬಗ್ಗೆ ಗಮನಹರಿಸಬೇಕಿದೆ.
ಇದನ್ನೂ ಓದಿ :Sowjanya./ಸೌಜನ್ಯ ಸಾವಿಗೆ ಮರು ಜೀವ : ತಾಯಿ ಕುಸುಮಾವತಿ ದೂರು