ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ತಾಲೂಕಿನ ಭಾವಿಕೇರಿ-ಕೇಣಿ ಗ್ರಾಮದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಕುರಿತು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಆಗಸ್ಟ್ 22 ರಂದು ಸಾರ್ವಜನಿಕ ಅಹವಾಲು ಸ್ವೀಕರಿಸುವ ಸಭೆಯನ್ನು ಆಯೋಜಿಸಲಾಗಿರುತ್ತದೆ.
ಸದರಿ ಸಭೆಗೆ ವಾಣಿಜ್ಯ ಬಂದರು ನಿರ್ಮಾಣದ ಪರವಾಗಿ ಮತ್ತು ವಿರೋಧವಾಗಿ ಸ್ಥಳೀಯರು ಮತ್ತು ಹೊರಗಿನವರು ಅವರ ಅಹವಾಲುಗಳನ್ನು ಸಲ್ಲಿಸಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸೇರುವ ಸಾಧ್ಯತೆ ಇರುತ್ತದೆ.
ಈ ವೇಳೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ದೃಷ್ಠಿಯಿಂದ ಅಂಕೋಲಾ ಶಹರದ ಬಸ್ ನಿಲ್ದಾಣ ವೃತ್ತದಿಂದ ಸುಂದರ ನಾರಾಯಣ ದೇವಸ್ಥಾನ ಪಿಕಾಕ್ ಬಾರ್ ವರೆಗಿನ ರಸ್ತೆಯಲ್ಲಿ ಸಂಚಾರ ಮತ್ತು ವಾಹನಗಳ ಪಾರ್ಕಿಂಗ್ ನ್ನು ಆಗಸ್ಟ್ 22 ರ ಬೆಳಿಗ್ಗೆ 5ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ಇದನ್ನೂ ಓದಿ: ಡಿಕಂಸಿ ಬಸ್ಗಳ ಓಡಾಟ : ಗ್ರಾಮೀಣ ಜನತೆಗೆ ನಿತ್ಯವೂ ನರಕಯಾತನೆ