ಸುದ್ದಿ ಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಯವ್ಯ ಸಾರಿಗೆ ನಿಗಮದ (ಡಿಕಂಸಿ, ನಿರ್ವಾಹಕ ರಹಿತ) ಬಸ್ ಸೇವೆಯಿಂದಾಗಿ , ಗ್ರಾಮೀಣ ಭಾಗದ ಪ್ರಯಾಣಿಕರು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಬಸ್ ವ್ಯವಸ್ಥೆ ಅವ್ಯವಸ್ಥೆಯಾಗಿದ್ದರೂ, ಅಧಿಕಾರಿಗಳು ಹಾಗೂ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿರುವುದು ಪ್ರಯಾಣಿಕರ ಆಕ್ರೋಶ ಕಾರಣವಾಗಿದೆ.
ಡಿಕಂಸಿ ಬಸ್ಗಳಿಗೆ ಗ್ರಾಮೀಣ ಭಾಗದ ಬಸ್ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಇಲ್ಲದೆ ಇರುವುದೇ ಪ್ರಯಾಣಿಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಒಂದರ ಹಿಂದೆ ಒಂದರಂತೆ ಈ ಡಿಕಂಸಿ ಬಸ್ ಸಂಚರಿಸುತ್ತಿದ್ದು, ಇದರಿಂದಾಗಿ ಗ್ರಾಮೀಣ ಭಾಗದಿಂದ ನಗರ,ಪಟ್ಟಣಕ್ಕೆ ಹೋಗಬೇಕಾದ ಪ್ರಯಾಣಿಕರು ರಸ್ತೆಯಲ್ಲೇ ಕಾಲಹರಣ ಮಾಡವ ಪರಿಸ್ಥಿತಿ ಮುಂದುವರೆದಿದೆ.
ಒಂದೇ ಸಮಯದಲ್ಲಿ ಒಂದರ ಹಿಂದೆ ಒಂದು ಡಿಕಂಸಿ ಬಸ್ ಸಂಚರಿಸುತ್ತಿದೆ., ಇದರಿಂದಾಗಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ಜನರನ್ನು ಗಂಟೆಗಟ್ಟಲೆ ಕಾಯಿಸುವುದು ಇಲಾಖೆಯ ಕಾಯಕವಾಗಿದೆ. ಡಿಕಂಸಿ ನಿಗಮದ ವಿರುದ್ಧ ಪ್ರಯಾಣಿಕರು ಕಿಡಿಕಾರುವಂತಾಗಿದೆ..
ಗ್ರಾಮೀಣ ಭಾಗದಿಂದ ಓಡಾಡುವ ಸರಕಾರಿ ನೌಕರರು, ವಿದ್ಯಾರ್ಥಿಗಳು, ಖಾಸಗಿ ಕೆಲಸಗಳಿಗೆ ತೆರಳುವ ಜನರು ಪ್ರತಿದಿನ ಬಸ್ಗಾಗಿ ರಸ್ತೆ ಬದಿಯಲ್ಲಿ ಕಾಯಬೇಕಾದ ಪರಿಸ್ಥಿತಿ. ಆದರೆ ಈ ಜನರ ನರಳಾಟವನ್ನು ಸರ್ಕಾರವೂ ನೋಡದೇ, ಅಧಿಕಾರಿಗಳೂ ಸ್ಪಂದಿಸದೇ ಕೈಕಟ್ಟಿ ಕುಳಿತಿರುವುದೇ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
“ಶಕ್ತಿ ಯೋಜನೆ” ಜಾರಿಗೆ ಬಂದ ಬಳಿಕವಂತೂ ಡಿಕಂಸಿ ಬಸ್ ಸಂಚಾರ ಮೊದಲಿಗಿಂತ ಅಧಿಕವಾಗಿದೆ. ಬಸ್ಗಳನ್ನು ಸಮಯಕ್ಕೆ ಸರಿಯಾಗಿ ಓಡಿಸುವುದು, ನಿಗದಿತ ವೇಳಾಪಟ್ಟಿಯನ್ನು ಪಾಲಿಸುವುದು ಸಾರಿಗೆ ನಿಗಮಕ್ಕೆ ಅಷ್ಟು ಕಷ್ಟವೇ?” ಎಂದು ಗ್ರಾಮೀಣ ಜನತೆ ಆಡಳಿತದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರಕ್ಕೆ ಪ್ರಯಾಣಿಕರ ನರಳಾಟ ಕಾಣುತ್ತಿಲ್ಲ. ಅಧಿಕಾರಿಗಳಿಗೆ ಪ್ರಯಾಣಿಕರ ನೋವು ಅರ್ಥವಾಗುತ್ತಿಲ್ಲ. ಹೀಗೇ ಮುಂದುವರಿದರೆ ಹೋರಾಟ ಅನಿವಾರ್ಯ ಅಂತಿದ್ದಾರೆ. ಗ್ರಾಮೀಣ ಭಾಗದ ಪ್ರಯಾಣಿಕರು.
ಇದನ್ನೂ ಓದಿ :ಲೈಂಗಿಕ ಕಿರುಕುಳ ಆರೋಪ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ರಾಜೀನಾಮೆ