ಸುದ್ದಿಬಿಂದು ಬ್ಯೂರೋ ವರದಿ
ಉಡುಪಿ : ಧರ್ಮಸ್ಥಳದ ಸೌಜನ್ಯ ಪ್ರಕರಣ ಹೋರಾಟಗಾರ ಹಾಗೂ ಸಮಾಜ ಸೇವಕ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ಬಾರಿ ನೋಟಿಸ್ ನೀಡಿದರೂ ತಿಮರೋಡಿ ವಿಚಾರಣೆಗೆ ಹಾಜರಾಗದ ಕಾರಣ ಪೊಲೀಸರು ಉಜಿರೆ ಬಳಿ ಅವರನ್ನು ವಶಕ್ಕೆ ಪಡೆದರು.

ವಶಕ್ಕೆ ಪಡೆಯುವ ವೇಳೆ ತಿಮರೋಡಿ ಮನೆ ಮುಂದೆ ಬೆಂಬಲಿಗರು ಜಮಾವಣೆಗೊಂಡು ಘೋಷಣೆಗಳನ್ನು ಕೂಗಿದರು. “ಸೌಜನ್ಯಗೆ ನ್ಯಾಯ ಬೇಕು” ಎಂದು ಕೂಗಿದ ಬೆಂಬಲಿಗರು ಪೊಲೀಸರ ಕ್ರಮವನ್ನು ಖಂಡಿಸಿದರು.

ಈ ವೇಳೆ ತಿಮರೋಡಿ ಸ್ವತಃ ಪ್ರತಿಕ್ರಿಯೆ ನೀಡುತ್ತಾ – “ನಾನು ಹೋರಾಟ ನಿಲ್ಲಿಸುವುದಿಲ್ಲ. ನನ್ನ ಜೀವಕ್ಕೆ ಏನಾದರೂ ಆದಲ್ಲಿ ಬಿಜೆಪಿ ಸರ್ಕಾರವೇ ಹೊಣೆಗಾರ” ಎಂದು ಘೋಷಿಸಿದರು.

ಸ್ಥಿತಿ ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲಾಧಿಕಾರಿಗಳು ಬ್ರಹ್ಮಾವರ ಠಾಣೆ ಸುತ್ತ 24 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.ಗೃಹ ಸಚಿವ ಜಿ. ಪರಮೇಶ್ವರ ಅವರ ಸೂಚನೆ ಮೇರೆಗೆ, ತಿಮರೋಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಮುಂದುವರಿಯುತ್ತಿದೆ.

ಇದನ್ನೂ ತಪ್ಪದೆ ಓದಿ:ಕೋನಳ್ಳಿಯಲ್ಲಿ ಸಂಪನ್ನಗೊಂಡ ಶ್ರೀ ಬ್ರಹ್ಮಾನಂದರ ಚಾತುರ್ಮಾಸ್ಯ ವ್ರತ : ಅಘನಾಶಿನಿ ನದಿ ದಡದಲ್ಲಿ