ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಅಜ್ವಿ ಹೊಟೇಲ್‌ನಲ್ಲಿ ವಿಶ್ವ ಛಾಯಾಚಿತ್ರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನ ಪತ್ರಿಕಾ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ್ ಉದ್ಘಾಟಿಸಿ ಮಾತನಾಡಿದರು. ಛಾಯಾಚಿತ್ರ ವೃತ್ತಿಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. “ನಾನು ಕೂಡ ಮೊದಲು ಫೋಟೋಗ್ರಾಫರ್ ಆಗಿದ್ದು, ಫೋಟೋ ಸ್ಟುಡಿಯೋ ಕೂಡ ಇತ್ತು. ಆದರೆ ಇಂದಿನ ಯುಗದಲ್ಲಿ ಫೋಟೋಗ್ರಾಫರ್‌ಗಳಿಗೆ ಹಿಂದಿನಂತೆ ಪ್ರೋತ್ಸಾಹ ಸಿಗುತ್ತಿಲ್ಲ,” ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಿರಿಯ ಫೋಟೋಗ್ರಾಫರ್ ಆಂಥೋನಿ ಫರ್ನಾಂಡಿಸ್ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅಸೋಸಿಯೇಷನ್ ಸದಸ್ಯರ ಮಕ್ಕಳಲ್ಲಿಯೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು. ವಿಶೇಷವಾಗಿ ಎಸ್ ಎಸ್ ಎಲ್ ಸಿಯಲ್ಲಿ 625/625 ಅಂಕ ಪಡೆದ ಬಾಲ ಮಂದಿರ ಶಾಲೆಯ ವಿದ್ಯಾರ್ಥಿ ಆದಿತ್ಯ ಅಜಿತ್ ನಾಯ್ಕ್, ಅವರನ್ನ ಗೌರವಿಸಲಾಯಿತು..ಅದೇ ರೀತಿ ಜಿಲ್ಲಾ ಉಪಾಧ್ಯಕ್ಷ ಅನಂತ ಪೈ ಹಾಗೂ ಗೌರವಾಧ್ಯಕ್ಷ ಸೂರಜ್ ಜೋಗಳೇಕರ್ ರವರಿಗೆ ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರೆಮಿ ಫರ್ನಾಂಡಿಸ್, ಉಪಾಧ್ಯಕ್ಷ ರವಿಕಾಂತ್ ನಾಯ್ಕ್, ಖಜಾಂಚಿ ಸಾಯಿನಾಥ್ ನಾಯ್ಕ್, ಕಾರ್ಯದರ್ಶಿ ಜಯಪ್ರಕಾಶ್ ಗೋಸಾವಿ ಸೇರಿದಂತೆ ಫೋಟೋಗ್ರಾಫರ್ ಅಸೋಸಿಯೇಷನ್‌ನ ಎಲ್ಲಾ ಸದಸ್ಯರು ಹಾಗೂ ಸಮುದಾಯದ ಅನೇಕ ಗಣ್ಯರು ಭಾಗವಹಿಸಿ ಛಾಯಾಚಿತ್ರ ವೃತ್ತಿಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಪ್ರತಿಪಾದಿಸಿದರು.
ಇದನ್ನೂ ಓದಿ : “ರಮ್ಯಾ ನೇಣಿಗೆ ಶರಣು” ಸಾವಿನ ಸುತ್ತ ಅನುಮಾತನದ ಹುತ್ತ..!