Sports News
ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸನ್ಯಾಸಿದೇವ ಗೆಳೆಯರ ಬಳಗದ ವತಿಯಿಂದ ಕೆಸರುಗದ್ದೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ ಕ್ರೀಡಾಕೂಟ ನಡೆಯಿತು.

ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಯವಕರು ಕೆಸರುಗದ್ದೆಯಲ್ಲಿ ಬಿದ್ದಾಡಿ, ಮಿಂದೆದ್ದು ಪ್ರೇಕ್ಷಕರ ಚಪ್ಪಾಳೆ ನಡುವೆ ತೀವ್ರ ಸ್ಪರ್ಧೆ ನಡೆಸಿ ಕ್ರೀಡಾಂಗಣವನ್ನು ಉತ್ಸಾಹದಿಂದ ಆಟವಾಡುವ ಮೂಲಕ ಕ್ರೀಡಾ ಅಭಿಮಾನಿಗಳ ಗಮನ ಸೆಳೆದರು.

ಗ್ರಾಮಸ್ಥರು, ಮಹಿಳೆಯರು, ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕ್ರೀಡಾಂಗಣಕ್ಕೆ ಆಗಮಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿದರು. ಹಟ್ಟಿಕೇರಿಯ ಕ್ರೀಡಾ‌ಪಟ್ಟುಗಳು ಈ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮ ಇನ್ನಷ್ಟು ಹೆಚ್ಚಿಸಿದ್ದಾರೆ.

ಇದನ್ನೂ ಓದಿ:ಸತೀಶ್ ಸೈಲ್ ಮನೆ ಮೇಲೆ ಇಡಿ ದಾಳಿ : ಕೋಟಿ ನಗದು-ಚಿನ್ನ ಪತ್ತೆ ; Xಖಾತೆಯಲ್ಲಿ ಮಾಹಿತಿ ಬಿಚ್ಚಿಟ್ಟ ED