🟥 ಪ್ರಮುಖ ಸುದ್ದಿ
ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಉತ್ತರಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲು ಯೋಚಿಸಲಾಗಿರುವ ಶರಾವತಿ ಪಂಪ್ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ವಿಧಾನಸಭೆಯಲ್ಲಿ ಇಂದು ತೀವ್ರ ಆಕ್ರೋಶ ಹೊರಹಾಕಿದರು.
“ನಮ್ಮ ಜಿಲ್ಲೆ ಎಷ್ಟು ತ್ಯಾಗ ಮಾಡಬೇಕು? ಯೋಜನೆಯಿಂದ ಕಾಡು ನಾಶವಾಗುತ್ತಿದೆ. ಶಿರೂರು ಸೇರಿದಂತೆ ಹಲವು ಕಡೆ ಗುಡ್ಡ ಕುಸಿತ ಸಂಭವಿಸಿದೆ. ಬೆಂಗಳೂರಿಗೆ ನೀರು ಒಯ್ಯುವ ಪ್ಲಾನ್ ಇದರ ಹಿಂದಿದೆ. ಈ ಯೋಜನೆಯನ್ನು ತಕ್ಷಣ ಕೈಬಿಡಬೇಕು, ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದರು.
ಶೆಟ್ಟಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, “ಈ ಯೋಜನೆಗೆ ಯಾವುದೇ ಆಣೆಕಟ್ಟು ನಿರ್ಮಾಣವಿಲ್ಲ. ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಯೋಜನೆಯಿಂದ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯ” ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:ನೂರಾರು ಶವ ಹೂತಿಟ್ಟ ಪ್ರಕರಣ” ಧರ್ಮಸ್ಥಳಕ್ಕೆ ಎನ್‌ಎಚ್‌ಆರ್‌ಸಿ ‘ಏಂಟ್ರಿ’