🟥 ಪ್ರಮುಖ ಸುದ್ದಿ
ಸುದ್ದಿಬಿಂದು ಬ್ಯೂರೋ‌ ವರದಿ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ (Dharmasthala Mass Burial Probe);ಬಂದಿರುವ ದೂರಿನ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ತನಿಖಾ ಕಾರ್ಯವನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ನಾಲ್ವರ ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಒಬ್ಬ ಐಪಿಎಸ್ (IPS) ಅಧಿಕಾರಿ ಸಹ ಇದ್ದಾರೆ. ತಂಡವು ವಿವಿಧ ಆಯಾಮಗಳಲ್ಲಿ ದಾಖಲೆಗಳು ಹಾಗೂ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಪಂಚಾಯತ್ ಕಚೇರಿಯಿಂದ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸುತ್ತಿದೆ.

ಮುಂದಿನ ನಾಲ್ಕು-ಐದು ದಿನ ಆಯೋಗ ಧರ್ಮಸ್ಥಳದಲ್ಲೇ ಶಿಬಿರ ಹೂಡಿ, ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಲಿದೆ. ಗೌಪ್ಯವಾಗಿ ಹಲವರನ್ನು ಭೇಟಿಯಾಗಿ ವಿಚಾರಣೆ ನಡೆಸುವ ಯೋಜನೆಯೂ ಇದೆ.

ಇದೇ ವೇಳೆ, ಎಸ್‌ಐಟಿ(SIT) ಹಾಗೂ ಆಯೋಗದ ಅಧಿಕಾರಿಗಳು ಬೆಳ್ತಂಗಡಿ ಪೊಲೀಸ್ ಠಾಣೆ, ಸ್ಥಳೀಯ ಪೊಲೀಸ್ ಠಾಣೆಗಳು ಮತ್ತು ಶವ ಹೂತಿಟ್ಟಿರುವುದು ಎನ್ನಲಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: ಮೀನು ಹಿಡಿಯಲು ಹೋಗಿ ನಾಪತ್ತಯಾಗಿದ್ದ ಯುವಕನ ಶವ ಪತ್ತೆ : ಇನ್ನೋರ್ವನಿಗಾಗಿ ಮುಂದುವರೆದ ಶೋಧ