ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ:ತಾಲೂಕಿನ ಮಾದನಸರ ಗ್ರಾಮದ ಮೀನು ಹಿಡಿಯಲು ಹೋಗಿದ್ದ ವೇಳೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಇಬ್ಬರೂ ಸಹೋದರರ ಪೈಕಿ ಓರ್ವ ಯುವಕನ ಶವ ಪತ್ತೆಯಾಗಿದೆ..
ಪತ್ತೆಯಾದ ಶವ ರಪೀಕ್ ಇಬ್ರಾಹಿಂ ಸಾಬ್ ಸೈಯ್ಯದ್ (27) ಎಂಬಾತನದ್ದು ಎಂದು ಗುರುತಿಸಲಾಗಿದೆ. ಗ್ರಾಮದ ಕವಲಗಿ ಹಳ್ಳದಲ್ಲಿ ಇಬ್ಬರು ಸಹೋದರರು ಮೀನು ಹಿಡಿಯಲು ಹೋದಾಗ, ಹಳ್ಳದ ನೀರಿನ ರಭಸಕ್ಕೆ ಇಬ್ಬರೂ ಕೊಚ್ಚಿ ಹೋಗಿದ್ದರು.
ಸ್ಥಳೀಯ ಬಿಳ್ಕಿ ಗ್ರಾಮದ ಮೊತೇಸ್ ಸಂತಾನ ಸಿದ್ದಿ ಶೋಧ ನಡೆಸಿ, ರಪೀಕ್‌ನ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮತ್ತೊಬ್ಬ ಸಹೋದರ ಹನೀಪ್ ಇಬ್ರಾಹಿಂ ಸಾಬ್ ಪತ್ತೆಗಾಗಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ.
ಇದನ್ನೂ ಓದಿ: ಶರತ್ ಆಚಾರಿ ಹತ್ಯೆ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ