ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಆತನ ಪತ್ನಿಯ ಕಿರುಕುಳವೇ ಕಾರಣವಾಯತ್ತೆ ಎನ್ನುವುದು ಆತನ ಪತ್ನಿ ಪತಿ ಚಂದ್ರಶೇಖ‌ ಮೇಲೆ‌ ಹಲ್ಲೆ ಮಾಡಿರುವ ಕಾರಣಕ್ಕೆ ತನ್ನ ಮಗ ಆತ್ಮಹತ್ಯೆ ಮಾಡಕೊಳ್ಳಲು ಕಾರಣ ಎಂದು ಮೃತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.,‌

ಯಲ್ಲಾಪುರ ತಾಲೂಕಿನ ತೆಲಂಗಾರ ಗ್ರಾಮದ ನಿವಾಸಿ ಹಾಗೂ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದ ಚಂದ್ರಶೇಖರ್ ಸಿದ್ದಿ ಆಗಸ್ಟ್‌ 1ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಚಂದ್ರಶೇಖರ್‌ ಅವರ ತಾಯಿ ಲಕ್ಷ್ಮಿ ಅವರು, ಮಗನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. “ಮಗನ ಮೇಲೆ ಪತ್ನಿ ಹಲ್ಲೆ ನಡೆಸಿದ ವಿಡಿಯೋ ಕೂಡ ಇದ್ದು. ಇದೇ ಕಿರುಕುಳ ಮಗನ ಆತ್ಮಹತ್ಯೆಗೆ ಕಾರಣವಾಗಿರಬಹುದು” ಎಂದು ಅವರು ಆರೋಪಿಸಿದ್ದಾರೆ.

ಮೃತ ಚಂದ್ರಶೇಖರ ಸಿದ್ದಿಗೆ ಕಳೆದ ಕೆಲ ತಿಂಗಳಿನಿಂದ ಉದ್ಯೋಗ ಇರಲಿಲ್ಲ. ಈ ಕಾರಣದಿಂದ ಅವರು ಮನೆಯಲ್ಲಿ ವಾಸವಾಗಿದ್ದು, ನಿರುದ್ಯೋಗ ಹಾಗೂ ಪತ್ನಿಯ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಕುಟುಂಬಸ್ಥರ ಆರೋಪ

ಘಟನೆಯ ನಂತರ,ಪತಿ–ಪತ್ನಿ ನಡುವೆ ನಡೆದ ಜಗಳದ ದೃಶ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ,ಆತ್ಮಹತ್ಯೆಯ ಹಿಂದೆ ಕುಟುಂಬ ಕಲಹವೇ ಪ್ರಮುಖ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.ಘಟನೆಯ ಕುರಿತು ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಅಕ್ರಮ ದಂಧೆಕೋರರರ ಪರ ನಿಂತ ಕನ್ನಡ ಪರ ಸಂಘಟನೆ ಅಧ್ಯಕ್ಷ : PSI ಎತ್ತಂಗಡಿಗೆ ಸಂಚು