ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಕಾಲ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಬಂದಿದ್ದ ಜನಾನುರಾಗಿಯಾಗಿ ಹಾಗೂ ಕುಮಟಾ ಪಿಎಲ್‌ಡಿ ಬ್ಯಾಂಕ್‌ನ ಹಾಲಿ ಸದಸ್ಯರಾಗಿದ್ದ ನಾರಾಯಣ ಎಸ್. ನಾಯ್ಕ ಅವರು ಇಂದು ವಿಧಿವಶರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ನಾರಾಯಣ ನಾಯ್ಕ (ಗೌರಸ್ಗಿ) ಚಿಕಿತ್ಸೆಗೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ರವಿವಾರ ಬೆಳಿಗ್ಗೆ 10.27ರ ಸುಮಾರಿಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಅನೇಕ ಬಾರಿ ಮಿರ್ಜಾನ್ ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಹಾಲಿ ಕುಮಟಾ ಪಿಎಲ್‌ಡಿ ಬ್ಯಾಂಕ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಾರಾಯಣ ನಾಯ್ಕ ಗುರುತಿಸಿಕೊಂಡು ಬಂದಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಪ್ರೀತಿಯ ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ..ಇವರು ಎಲ್ಲಾ ರಾಜಕೀಯ ಪಕ್ಷದ ನಾಯಕರು ಹಾಗೂ ಮುಖಂಡರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಸ್ಥಳೀಯ ಶಾಸಕರು ಹಾಗೂ ಅವರ ಆತ್ಮೀಯರಾದ ದಿನಕರ ಶೆಟ್ಟಿ, ಸೂರಜ್ ನಾಯ್ಕ ಸೋನಿ, ಪ್ರದೀಪ ನಾಯಕ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂವನ್ ಭಾಗವತ್, ಉದ್ಯಮಿಗಳಾದ ಅಶೋಕ ಶೇಟ್, ಧೀರೂ ಶಾನಭಾಗ ಸೇರಿದಂತೆ ಕುಮಟಾ, ಸಾಗರ ಹಾಗೂ ಶಿವಮೊಗ್ಗದಿಂದಲೂ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಆಗಮಿಸಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ಧರ್ಮಸ್ಥಳ ಕೇಸ್; ಮತ್ತೊಂದು ಹೊಸ ಸಾಕ್ಷಿ ಎಂಟ್ರಿ