ಸುದ್ದಿಬಿಂದು ಬ್ಯೂರೋ‌ ವರದಿ
ಕುಮಟಾ: ತಾಲೂಕಿನ ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾಗಿರುವ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು
ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರ ಪಾದಪೂಜೆಯನ್ನು ಜು.20, ಭಾನುವಾರದಂದು ಶ್ರೀ ವನದುರ್ಗಾ ದೇವಾಲಯದಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಅವರ ಕುಟುಂಬದವರು ನೆರವೇರಿಸಿದರು.

ಶಿರಸಿ-ಸಿದ್ದಾಪುರ ತಾಲೂಕಿನ ನೂರಾರು ಸಮಾಜ ಬಾಂಧವರು, ಕುಟುಂಬದ ಹಿತೈಷಿಗಳ ಸಮೇತರಾಗಿ ತೆರಳಿ ವಿಶೇಷ ಪಾದಪೂಜೆ ಸಲ್ಲಿಸಿ ಗುರುಗಳ ಮಂತ್ರಾಕ್ಷತೆ ಪಡೆದರು.ಈ ಸಂದರ್ಭದಲ್ಲಿ ಪರಮ ಪೂಜ್ಯ ಗುರುಗಳು ಸಂಪೂರ್ಣವಾಗಿ ಹರಸಿ, ಉದ್ಯೋಗ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸುಗಳಿಸುವಂತೆ ಹಾರೈಸಿ ಆಶೀರ್ವದಿಸಿದರು. ಇದರ ಜೊತೆಗೆ ನವೆಂಬರ್ ನಲ್ಲಿ ಶ್ರೀ ಮಠದ ವತಿಯಿಂದ ಹರಿದ್ವಾರ ಪುಣ್ಯಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವೆ ಸಲ್ಲಿಸಲು ಸ್ವಾಮೀಜಿ ಆದೇಶ ನೀಡಿದರು.

ಶ್ರೀಗುರುಗಳ ಪಾದಪೂಜೆ ಸಲ್ಲಿಸುವ ವೇಳೆ ಪ್ರಮುಖರಾದ ಶ್ರೀಮತಿ ಶೋಭಾ ನಾಯ್ಕ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಸಂತೋಷ ನಾಯ್ಕ, ರಾಘವೇಂದ್ರ ನಾಯ್ಕ, ಉಷಾ ನಾಯ್ಕ, ದೀಪಾ ನಾಯ್ಕ, ಪ್ರಭಾವತಿ ಗೌಡ, ಶಿಲ್ಪಾ ಭಾಸ್ಕರ್, ಶಿವಾಜಿ, ವಿನಯ ಹೆಗಡೆ, ಗಣಪತಿ ನಾಯ್ಕ, ಸಿದ್ದಾಪುರದ ಕೃಷ್ಣಮೂರ್ತಿ ನಾಯ್ಕ ಐಸೂರು, ಆದರ್ಶ ಪೈ, ಗಿರೀಶ್ ಸೇರಿದಂತೆ ಹಲವಾರು ಮುಖಂಡರು ಜೊತೆಗಿದ್ದರು.

ಇದನ್ನೂ ಓದಿ : ಕೋಳಿ ಅಂಕದ ಅಡ್ಡೆಯ ಮೇಲೆ ದಾಳಿ : ಕೋಳಿ ಕಸ್ಟ್‌ಡಿಗೆ ಆರೋಪಿಗಳು ಪರಾರಿ