ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕಾರವಾರದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಮೆಡಿಕಲ್ ಕಾಲೇಜು ಅಧೀನ ಜಿಲ್ಲಾ ಆಸ್ಪತ್ರೆಯ ವೈದ್ಯ, ಅಧೀಕ್ಷಕ ಶಿವಾನಂದ ಕುಡ್ತಲಕರ್‌ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್ ಅವರ ಎದುರು ಲೋಕಾಯುಕ್ತ ಅಧಿಕಾರಿಗಳು ಗುರುವಾರ ತಡ ರಾತ್ರಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಶಿವಾನಂದ ಕುಡ್ತಲಕರ್‌ಗೆ ಹಾಜರುಪಡಿಸಲಾಗಿತ್ತು. ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರು ಆದೇಶಿಸಿ. ಟ್ರಾಪ್ ಆದ ಶಿವಾನಂದ ಅವರನ್ನು ಕಾರವಾರ ಕಾರಾಗೃಹಕ್ಕೆ ಕಳಿಸಲಾಯಿತು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಮಧ್ಯಂತರ ಜಾಮೀನು ರಿಜಕ್ಟ್:
ಲೋಕಾಯುಕ್ತ ಬಂಧನಕ್ಕೆ ಒಳಗಾಗಿದ್ದ ಕಾರವಾರ ಕ್ರಿಮ್ಸ ಆಸ್ಪತ್ರೆ ಅಧೀಕ್ಷಕ ಶಿವಾನಂದ ಮಧ್ಯಂತರ ಜಾಮೀನಿಗೆ ಅರ್ಜಿ ಹಾಕಿದ್ದು. ಜಾಮೀನು ಅರ್ಜಿಯನ್ನು ನ್ಯಾಯಾಧೀಶ ವಿಜಯ್ ಕುಮಾರ್ ಲಂಚ ಪಡೆದ ವೈದ್ಯ ಕುಡ್ತಾಲಕರ್ ಜಾಮೀನು ಅರ್ಜಿಯನ್ನ ಶುಕ್ರವಾರ ಸಹ ವಜಾ ಮಾಡಿದೆ. ಲೋಕಾಯುಕ್ತರ ಪರ ವಾದಿಸಿದ ವಕೀಲರು, ಶಿವಾನಂದ ಕುಡತಲ್ಕರ್ ಪ್ರಭಾವಿ ಆದ ಕಾರಣ, ಅವರಿಗೆ ಜಾಮೀನು ನೀಡುವುದು ಸರಿಯಲ್ಲ ಎಂದರು. ಲೋಕಾಯುಕ್ತ ಅಧಿಕಾರಿಗಳು ಸಹ ಜಾಮೀನು ನೀಡಿಕೆಯನ್ನು ವಿರೋಧಿಸಿದರು. ಸೋಮವಾರ ರೆಗುಲರ್ ಬೇಲ್ ಗೆ ಅರ್ಜಿ ಹಾಕಲು ಶಿವಾನಂದ ಕುಡ್ತಲಕರ್ ಪರ ವಕೀಲರು ತಿರ್ಮಾನಿಸಿದ್ದಾರೆ ಎನ್ನಲಾಗಿದೆ..
ಇದನ್ನೂ ಓದಿ:ಗುರುಪೂರ್ಣಿಮೆ ಪ್ರಯುಕ್ತ ಶಾಸ್ತ್ರೀಯ ವಾದನಗಳ ಸಂಗೀತ ಸಂಜೆ