ದಾಂಡೇಲಿ : ನಗರದ ಲಿಂಕ್ ರಸ್ತೆಯಲ್ಲಿರು ಎರಡು ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ..
ಲಿಂಕ್ ರಸ್ತೆಯಲ್ಲಿರುವ ಸೋನಾ ಮೆಡಿಕಲ್ ಅಂಗಡಿಗೆ ಮತ್ತು ಶಬ್ಬೀರ್ ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಅಂಗಡಿಗೆ ಅಂಗಡಿಯ ಮೇಲ್ಚಾವಣಿ ಸೀಟು ಒಡೆದು ಕಳ್ಳರು ಒಳ ನುಗ್ಗಿದ್ದಾರೆ. ಸೋನಾ ಮೆಡಿಕಲ್ ಶಾಪಿನಲ್ಲಿ ಡ್ರವರಿನಲ್ಲಿಟ್ಟಿದ್ದ ಅಂದಾಜು ನಾಲ್ಕರಿಂದ ಐದು ಸಾವಿರ ರೂಪಾಯಿ ಚಿಲ್ಲರೆ ಹಣ ಕಳವು ಮಾಡಿದ್ದಾರೆ ಎಂದು ಮಾಲಿಕ ಸತೀಶ್ ಬಿದಾದ ಅವರು ಹಾಗೂ ಶಬ್ಬೀರ್ ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಅಂಗಡಿಯಿಂದ ಅಂದಾಜು 1,500/- ರೂ ನಗದು ಮತ್ತು ಮೂರ್ನಾಲ್ಕು ಮೊಬೈಲ್ ಕಳವಾಗಿರುವುದರ ಬಗ್ಗೆ ಮಾಲಿಕ ಶಬ್ಬೀರ್ ಹುಸೇನ್ ಸಾಬ್ ಪಾನವಾಲೆ ಅವರು ಇಂದು ಗುರುವಾರ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆಯೂ ಇದೇ ಲಿಂಕ್ ರಸ್ತೆಯಲ್ಲಿ ಎರಡು ಮೂರು ಅಂಗಡಿಗಳಿಗೆ ಕಳ್ಳರು ನುಗ್ಗಿರುವ ಘಟನೆ ನಡೆದೆ.