ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ರೈಲಿನಲ್ಲಿ ಪ್ರಯಾಣ ಮಾಡುವಾಗ ಬಂಗಾರ, ಮೊಬೈಲ್, ಹಣ ಕಳ್ಳತನ ಮಾಡುವ ಹಲವು ಘಟನೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಕೊಂಕಣ ರೈಲಿನಲ್ಲಿ ಸಹ ಇಂತಹ ಪ್ರಕರಣ ಆಗಾಗ ನಡೆಯುತ್ತಲೇ ಇದ್ದು, ಇದಕ್ಕೆ ಕಡಿವಾಣ ಹಾಕಲು ಮಾತ್ರ ಆಗುತ್ತಿಲ್ಲ. ಯುವಕನೋರ್ವ ನೀಡಿದ್ದ ಚಾಕಲೇಟನ್ನ ತಿಂದ ಕುಟುಂಬವೊಂದು ದಿನವಿಡಿ ಮಲಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಕುಟುಂಬವೊಂದು ಎರಡು ದಿನದ ಹಿಂದೆ ತಂದೆ,ತಾಯಿ ಹಾಗೂ ಮಗಳು ಮಂಡಗಾಂವ್ ನಿಂದ ಮಂಗಳೂರಿಗೆ ಬರುವ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಇನ್ನು ಮಡಗಾಂವ್ ನಿಂದ ಹೊನ್ನಾವರಕ್ಕೆ ಈ ಕುಟುಂಬ ಬರುತ್ತಿದ್ದರಿಂದ ಈ ರೈಲು ಹೊನ್ನಾವರದಲ್ಲಿ ನಿಲುಗಡೆ ಮಾಡುವುದರಿಂದ ಬಂದಿದ್ದರು.
ಕುಟುಂಬ ಇದ್ದ ಬೋಗಿಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದು ಕುಟುಂಬದ ಮೂವರು ಕುಳಿತಿದ್ದ ಸೀಟಿನ ಎದುರು ಯುವಕನೋರ್ವ ಕುಳಿತಿದ್ದನಂತೆ. ಯುವಕ ಕುಟುಂಬದವರು ಜೊತೆ ಮಾತನಾಡಿ ಸ್ನೇಹ ಬೆಳೆಸಿಕೊಂಡಿದ್ದನಂತೆ. ಇನ್ನು ಟನಲ್ ಗಳು ಬರಲು ಪ್ರಾರಂಭವಾದ ಯುವಕ ಕುಟುಂಬಸ್ಥರಿಗೆ ಚಾಕಲೇಟನ್ನ ನೀಡಿದ್ದಾನೆ.
ಆದರೆ ಕುಟುಂಬಸ್ಥರು ಈ ಚಾಕಲೇಟನ್ನ ತಿಂದಿರಲಿಲ್ಲ. ಬದಲಾಗಿ ತಾವು ತಂದಿದ್ದ ಬಿಸ್ಕೇಟನ್ನ ಮಾತ್ರ ತಿಂದು ಚಾಕಲೇಟನ್ನ ಮಾತ್ರ ತಿನ್ನಲು ಹೋಗಿರಲಿಲ್ಲ. ಇನ್ನು ಕುಟುಂಬದವರು ವಾಪಾಸ್ ಊರಿಗೆ ಬಂದ ನಂತರ ಯುವಕ ನೀಡಿದ್ದ ಚಾಕಲೇಟನ್ನ ತಿಂದಿದ್ದರಂತೆ. ಇನ್ನು ತಿಂದ ನಂತರ ಚಾಕಲೇಟ್ ತಿಂದ ಮೂವರು ನಿದ್ರೆಗೆ ಜಾರಿದ್ದಾರೆ.
ದಿನವಿಡಿ ಮಲಗಿದ್ದು ಎದ್ದ ನಂತರ ಯುವಕ ನೀಡಿದ ಚಾಕಲೇಟಿನಲ್ಲಿ ಸಮಸ್ಯೆ ಇರುವುದು ತಿಳಿದು ಬಂದಿದೆ ಎನ್ನಲಾಗಿದೆ. ಇನ್ನು ಯುವಕ ಚಾಕಲೇಟನ್ನ ಕುಟುಂಬಸ್ಥರಿಗೆ ತಿನ್ನಿಸಿ ನಂತರ ಎಲ್ಲರು ಮಲಗಿದ ನಂತರ ಹಣ, ಬಂಗಾರ, ಮೊಬೈಲ್ ದೋಚಿ ಎಸ್ಕೇಪ್ ಆಗುವ ಪ್ಲ್ಯಾನ್ ಮಾಡಿರಬಹದು ಎನ್ನಲಾಗಿದ್ದು ಕುಟುಂಬಸ್ಥರು ರೈಲಿನಲ್ಲಿ ಚಾಕಲೇಟ್ ತಿನ್ನದೇ ಬಿಸ್ಕೇಟ್ ತಿಂದಿದ್ದರಿಂದ ಅದೃಷ್ಟವಶಾತ್ ಬಚಾವಾಗಿದ್ದಾರೆ.
ಅಪರಿಚಿತರ ಬಗ್ಗೆ ಎಚ್ಚರವಿರಲಿ…!
ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ ಅಪರಿಚಿತರ ಬಗ್ಗೆ ಪ್ರಯಾಣಿಕರು ಎಚ್ಚರದಿಂದ ಇರಬೇಕಾಗಿದೆ. ರೈಲು ಸಂಚಾರದ ವೇಳೆ ಎದುರು ಕುಳಿತ ಹಲವರು ಪರಿಚಯ ಆಗುತ್ತಾರೆ.
ಇನ್ನು ಪರಿಚಯ ಮಾಡಿಕೊಂಡು ಹಲವು ಬಾರಿ ಕಳ್ಳತನ ಮಾಡಿ ಪರಾರಿಯಾದ ಘಟನೆಗಳು ನಡೆದಿದೆ. ಇನ್ನು ಎರಡು ದಿನದ ಹಿಂದೆ ನಡೆದ ಪ್ರಕರಣದಲ್ಲಿ ಸಹ ಯುವಕ ನೀಡಿದ್ದ ಚಾಕಲೇಟ್ ತಿಂದಿದ್ದರಿಂದ ಕುಟುಂಬಸ್ಥರು ನಿದ್ರೆಗೆ ಜಾರಿದ ವೇಳೆಯಲ್ಲಿ ಕಳ್ಳತನ ಮಾಡುವ ಸಾಧ್ಯತೆಗಳೇ ಹೆಚ್ಚಾಗಿತ್ತು.
ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹ ಪ್ರಯಾಣದ ವೇಳೆ ಅಪರಿಚಿತರ ಮೇಲೆ ಜಾಗೃತಿ ವಹಿಸಿದರೆ ಮುಂದೆ ಆಗುವ ಅನಾಹುತವನ್ನ ತಡೆಯಬಹುದಾಗಿದೆ.
ಇದನ್ನೂ ಓದಿ